ಪ್ರೆಗ್ನೆನ್ಸಿ ಎಂಬುದು ಬಹಳಷ್ಟು ರೋಮಾಂಚಕಾರಿ ಮತ್ತು ಆನಂದಕರ ಸಮಯ, ಆದರೆ ಇದು ಹಲವಾರು ಪ್ರಶ್ನೆಗಳೊಂದಿಗೆ ಬರುತ್ತದೆ. ಗರ್ಭಿಣಿಯರಿಗೆ ಪ್ರೆಗ್ನೆನ್ಸಿಯಲ್ಲಿಯೂ ಸಹ ಪೀರಿಯಡ್ಸ್ ಬರುತ್ತೆಯೇ ಎಂಬುದು ಒಂದು ಸಾಮಾನ್ಯ ಪ್ರಶ್ನೆಯಾಗಿದೆ. ಯಾವುದೇ ಗೊಂದಲಗಳನ್ನು ನಿವಾರಿಸಲು ಮತ್ತು ಪ್ರೆಗ್ನೆನ್ಸಿಯಲ್ಲಿ ಏನಾಗುತ್ತದೆ ಎಂಬುದರ ಕುರಿತು ನಿಮಗೆ ಉತ್ತಮ ತಿಳುವಳಿಕೆಯನ್ನು ನೀಡಲು ನಾವು ಈ ವಿಷಯವನ್ನು ವಿವರವಾಗಿ ತಿಳಿಸಿಕೊಡುತ್ತೇವೆ.
ಪ್ರೆಗ್ನೆನ್ಸಿ ಸಮಯದಲ್ಲಿ ಓವ್ಯುಲೇಶನ್ ಸಂಭವಿಸುತ್ತದೆಯೇ?
ಸಾಮಾನ್ಯವಾಗಿ, ಪ್ರೆಗ್ನೆನ್ಸಿಯಲ್ಲಿ ಓವ್ಯುಲೇಶನ್ (ಫಲದೀಕರಣಕ್ಕಾಗಿ ಮೊಟ್ಟೆ ಬಿಡುಗಡೆಯಾಗುವುದು) ಸಂಭವಿಸುವುದಿಲ್ಲ. ಮಹಿಳೆ ಗರ್ಭಿಣಿಯಾದಾಗ, ಆಕೆಯ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳು ಓವ್ಯುಲೇಶನ್ ಅಥವಾ ಅಂಡಾಶಯದಿಂದ ಮೊಟ್ಟೆಗಳು ಬಿಡುಗಡೆಯಾಗುವುದನ್ನು ತಡೆಯುತ್ತವೆ. ಕೆಲವು ಮಹಿಳೆಯರು ಪ್ರೆಗ್ನೆನ್ಸಿಯಲ್ಲಿ ಹಾರ್ಮೋನುಗಳ ಏರಿಳಿತಗಳಿಂದಾಗಿ ಓವ್ಯುಲೇಶನ್ ನಂತಹ ಸೆನ್ಸೇಶನ್ಗಳನ್ನು ಹೊಂದಿರಬಹುದು, ಆದರೆ ಯಾವುದೇ ಮೊಟ್ಟೆ ಉತ್ಪತ್ತಿಯಾಗುವುದಿಲ್ಲ. ಗರ್ಭಧಾರಣೆಯು ಸಾಮಾನ್ಯ ಪೀರಿಯಡ್ ಸೈಕಲ್ ಅನ್ನು ಮುರಿಯುತ್ತದೆ ಮತ್ತು ಈ ಅವಧಿಯಲ್ಲಿ ಓವ್ಯುಲೇಶನ್ ನಿಲ್ಲುತ್ತದೆ ಎಂಬುದನ್ನು ನೆನಪಿನಲ್ಲಿಡುವುದು ಅವಶ್ಯಕ. ಪ್ರೆಗ್ನೆನ್ಸಿಯಲ್ಲಿ ಓವ್ಯುಲೇಶನ್ ಬಗ್ಗೆ ನಿಮಗೆ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದರೆ, ವೈಯಕ್ತಿಕ ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಸ್ಪಾಟಿಂಗ್ ಎಂದರೆ ಏನು ಮತ್ತು ಅದು ಯಾಕೆ ಉಂಟಾಗುತ್ತದೆ?
ಸ್ಪಾಟಿಂಗ್ ಎಂದರೆ ಸಾಮಾನ್ಯ ಪೀರಿಯಡ್ ನ ಹೊರಗೆ ಸಂಭವಿಸುವ ಬಹಳ ಕಡಿಮೆಯಾದ ರಕ್ತಸ್ರಾವ. ಇದರಲ್ಲಿ ಸಾಮಾನ್ಯವಾಗಿ ಸಣ್ಣ ಪ್ರಮಾಣದ ರಕ್ತಸ್ರಾವ ಉಂಟಾಗಬಹುದು ಮತ್ತು ಲೈಟ್ ಪಿಂಕ್ ಅಥವಾ ಬ್ರೌನ್ ಬಣ್ಣದ ಸ್ರಾವದಂತೆ ಕಾಣಿಸಬಹುದು. ಪ್ರೆಗ್ನೆನ್ಸಿಯಲ್ಲಿ, ಸ್ಪಾಟಿಂಗ್ ವಿವಿಧ ಕಾರಣಗಳಿಗಾಗಿ ಸಂಭವಿಸಬಹುದು:
-
ಇಂಪ್ಲಾಂಟೇಶನ್ ಬ್ಲೀಡಿಂಗ್
ಫರ್ಟಿಲೈಜ್ ಆದ ಮೊಟ್ಟೆಯು ಗರ್ಭಾಶಯದ ಲೈನಿಂಗ್ ಗೆ ಅಂಟಿಕೊಂಡಾಗ, ಸ್ವಲ್ಪ ಬ್ಲೀಡಿಂಗ್ ಆಗುತ್ತದೆ. ಇದು ಸಾಮಾನ್ಯವಾಗಿ ನಿರೀಕ್ಷಿತ ಪೀರಿಯಡ್ ಸಮಯದಲ್ಲಿ ಸಂಭವಿಸುತ್ತದೆ ಮತ್ತು ಸಾಮಾನ್ಯವಾಗಿ ರೆಗ್ಯುಲರ್ ಪೀರಿಯಡ್ ಗಿಂತ ಲೈಟ್ ಆಗಿರುತ್ತದೆ ಮತ್ತು ಕಡಿಮೆ ಇರುತ್ತದೆ. -
ಸರ್ವೈಕಲ್ ಬದಲಾವಣೆಗಳು
ಪ್ರೆಗ್ನೆನ್ಸಿ ಹಾರ್ಮೋನುಗಳು ಸರ್ವಿಕ್ಸ್ ನಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು, ವಿಶೇಷವಾಗಿ ಇಂಟರ್ಕೋರ್ಸ್ ಅಥವಾ ಪೆಲ್ವಿಕ್ ಪರೀಕ್ಷೆಯ ನಂತರ ಬ್ಲೀಡಿಂಗ್ ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ. -
ಹಾರ್ಮೋನು ಬದಲಾವಣೆಗಳು
ಪ್ರೆಗ್ನೆನ್ಸಿ ಸಮಯದಲ್ಲಿ ಉಂಟಾಗುವ ಹಾರ್ಮೋನ್ ಮಟ್ಟದಲ್ಲಿನ ಏರಿಳಿತಗಳು ಕೆಲವೊಮ್ಮೆ, ವಿಶೇಷವಾಗಿ ಆರಂಭಿಕ ಹಂತಗಳಲ್ಲಿ, ಸ್ಪಾಟಿಂಗ್ ಗೆ ಕಾರಣವಾಗಬಹುದು.
ಸ್ಪಾಟಿಂಗ್ ಮತ್ತು ಪೀರಿಯಡ್ಸ್ ನಡುವಿನ ವ್ಯತ್ಯಾಸಗಳನ್ನು ಕಂಡುಹಿಡಿಯುವುದು
ಪ್ರೆಗ್ನೆನ್ಸಿ ಸಮಯದಲ್ಲಿ ಸ್ಪಾಟಿಂಗ್ ಮತ್ತು ಪೀರಿಯಡ್ಸ್ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಸಂಭಾವ್ಯ ಕಳವಳಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸೂಕ್ತ ವೈದ್ಯಕೀಯ ಸಲಹೆಯನ್ನು ಪಡೆಯಲು ಬಹಳ ಮುಖ್ಯ. ಇಲ್ಲಿ ಮೂರು ಪ್ರಮುಖ ವ್ಯತ್ಯಾಸಗಳಿವೆ:
1. ರಕ್ತಸ್ರಾವ ಮತ್ತು ಅವಧಿ
ಸ್ಪಾಟಿಂಗ್: ಸ್ಪಾಟಿಂಗ್ ಎಂದರೆ ಲೈಟ್ ಆಗಿ ರಕ್ತಸ್ರಾವವಾಗುತ್ತದೆ, ಇದು ಸಾಮಾನ್ಯವಾಗಿ ಸಾಮಾನ್ಯ ಪೀರಿಯಡ್ ಗೆ ಹೋಲಿಸಿದರೆ ಕಡಿಮೆಯಾಗಿರುತ್ತೆ ಮತ್ತು ಕಡಿಮೆ ಅವಧಿಯನ್ನು ಹೊಂದಿರುತ್ತದೆ. ಇದು ಕೆಲವು ಗಂಟೆಗಳು ಅಥವಾ ಒಂದೆರಡು ದಿನಗಳವರೆಗೆ ಮಾತ್ರ ಇರುತ್ತದೆ.
ಮುಟ್ಟು: ಪೀರಿಯಡ್ನಲ್ಲಿ ಭಾರೀ ಬ್ಲೀಡಿಂಗ್ ಕಂಡುಬರುತ್ತದೆ, ಇದು ಸಾಮಾನ್ಯವಾಗಿ ಹಲವಾರು ದಿನಗಳವರೆಗೆ ಇರುತ್ತದೆ, ಪೀರಿಯಡ್ನ ಆದ್ಯಂತ ಸ್ಥಿರವಾದ ಬ್ಲೀಡಿಂಗ್ ಇರುತ್ತದೆ.
2. ಬಣ್ಣ ಮತ್ತು ಸ್ಥಿರತೆ
ಸ್ಪಾಟಿಂಗ್: ಸ್ಪಾಟಿಂಗ್ ಲೈಟ್ ಪಿಂಕ್ ಅಥವಾ ಬ್ರೌನ್ ಬಣ್ಣದ ಸ್ರಾವದಂತೆ ಕಾಣಿಸಬಹುದು ಮತ್ತು ಸಾಮಾನ್ಯವಾಗಿ ಹೆಚ್ಚು ನೀರಿನಂಶ ಅಥವಾ ಮ್ಯೂಕಸ್ ನಂತಹ ಮಂದವನ್ನು ಹೊಂದಿರುತ್ತದೆ.
ಮುಟ್ಟು: ಮುಟ್ಟಿನ ರಕ್ತವು ಸಾಮಾನ್ಯವಾಗಿ ಬ್ರೈಟ್ ರೆಡ್ ಬಣ್ಣದ್ದಾಗಿರುತ್ತದೆ ಮತ್ತು ಸ್ಪಾಟಿಂಗ್ ಗೆ ಹೋಲಿಸಿದರೆ ದಪ್ಪವಾದ ಮಂದವನ್ನು ಹೊಂದಿರುತ್ತದೆ.
3. ಟೈಮಿಂಗ್
ಸ್ಪಾಟಿಂಗ್: ಪ್ರೆಗ್ನೆನ್ಸಿಯ ವಿವಿಧ ಸಮಯಗಳಲ್ಲಿ ಸ್ಪಾಟಿಂಗ್ ಸಂಭವಿಸಬಹುದು, ಇಂಪ್ಲಾಂಟೇಶನ್ ಸಮಯದಲ್ಲಿ, ಸರ್ವಿಕ್ಸ್ ಬದಲಾವಣೆಗಳ ಸಮಯದಲ್ಲಿ ಅಥವಾ ಹಾರ್ಮೋನುಗಳ ಏರಿಳಿತಗಳಿದ್ದಾಗ ಇದು ಉಂಟಾಗಬಹುದು. ಇದು ವಿರಳವಾಗಿ ಸಂಭವಿಸಬಹುದು ಮತ್ತು ಇದು ಮುಟ್ಟಿನ ಸಮಯಕ್ಕೆ ಸಂಬಂಧಿಸಿರುವುದಿಲ್ಲ.
ಮುಟ್ಟು: ಪ್ರೆಗ್ನೆನ್ಸಿಯಲ್ಲಿ ಪೀರಿಯಡ್ಸ್ ಸಂಭವಿಸುವುದಿಲ್ಲ. ರಕ್ತಸ್ರಾವವು ಹರಿವು, ಬಣ್ಣ ಮತ್ತು ಸಮಯದಲ್ಲಿ ರೆಗ್ಯುಲರ್ ಪೀರಿಯಡ್ ನಂತೆ ಇದ್ದರೆ, ಅದು ಸಂಭಾವ್ಯ ಸಮಸ್ಯೆಯನ್ನು ಸೂಚಿಸುತ್ತದೆ ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.
ಪ್ರೆಗ್ನೆನ್ಸಿಯಲ್ಲಿ ಓವ್ಯುಲೇಶನ್ ಕುರಿತು ತಿಳಿದುಕೊಳ್ಳೋಣ
ಕೆಲವೊಮ್ಮೆ, ಪ್ರೆಗ್ನೆಂಟ್ ಮಹಿಳೆಯರು ಓವ್ಯುಲೇಶನ್ (ಫಲದೀಕರಣಕ್ಕಾಗಿ ಮೊಟ್ಟೆ ಬಿಡುಗಡೆಯಾಗುವುದು) ಗೆ ಹೋಲುವ ಕೆಲವು ಲಕ್ಷಣಗಳನ್ನು ಗಮನಿಸುತ್ತಾರೆ, ಉದಾಹರಣೆಗೆ ಕ್ರಾಂಪ್ಸ್ ಅಥವಾ ಸರ್ವೈಕಲ್ ಮ್ಯೂಕಸ್ನಲ್ಲಿ ಬದಲಾವಣೆಗಳು. ಇದು ನಿಮ್ಮನ್ನು ಕನ್ಫ್ಯೂಸ್ ಮಾಡಬಹುದು ಜೊತೆಗೆ ನಿಮ್ಮ ಚಿಂತೆಗೆ ಕಾರಣವಾಗಬಹುದು. ನೀವು ಗರ್ಭಿಣಿಯಾಗಿದ್ದರೆ ಮತ್ತು ಈ ಲಕ್ಷಣಗಳನ್ನು ಗಮನಿಸಿದರೆ ಅಥವಾ ಓವ್ಯುಲೇಶನ್ (ಫಲದೀಕರಣಕ್ಕಾಗಿ ಮೊಟ್ಟೆ ಬಿಡುಗಡೆಯಾಗುವುದು) ಬಗ್ಗೆ ಕಳವಳಗೊಂಡಿದ್ದರೆ, ನಿಮ್ಮ ವೈದ್ಯರೊಂದಿಗೆ ಮಾತನಾಡಿ. ಅವರು ಏನಾಗುತ್ತಿದೆ ಎಂಬುದನ್ನು ವಿವರಿಸಬಹುದು ಮತ್ತು ನಿಮ್ಮ ಚಿಂತೆಗಳನ್ನು ನಿವಾರಿಸಬಹುದು. ನೆನಪಿಡಿ, ಪ್ರೆಗ್ನೆನ್ಸಿಯಲ್ಲಿ ಓವ್ಯುಲೇಶನ್ ಸಂಭವಿಸುವುದಿಲ್ಲ. ನೀವು ಗರ್ಭಿಣಿಯಾದ ನಂತರ, ನಿಮ್ಮ ದೇಹವು ಸಾಮಾನ್ಯವಾಗಿ ಮೊಟ್ಟೆಗಳು ಬಿಡುಗಡೆ ಮಾಡುವುದನ್ನು ನಿಲ್ಲಿಸುತ್ತದೆ. ಆದ್ದರಿಂದ, ನೀವು ಭಾವಿಸುವ ಯಾವುದೇ ಲಕ್ಷಣಗಳನ್ನು ನಿರ್ಧಾರಿಸಲು ನಿಮ್ಮ ವೈದ್ಯರು ಅದನ್ನು ನೋಡಬೇಕು.
ತೀರ್ಮಾನ
ಒಟ್ಟಾರೆಯಾಗಿ, ಪ್ರೆಗ್ನೆನ್ಸಿಯಲ್ಲಿ ಪೀರಿಯಡ್ ಸಂಭವಿಸುವುದಿಲ್ಲ ಎಂದು ತಿಳಿದುಕೊಳ್ಳುವುದು ಗರ್ಭಿಣಿಯರಲ್ಲಿ ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಗತ್ಯವಿದ್ದಾಗ ಸಹಾಯವನ್ನು ಪಡೆಯಲು ಬಹಳ ಮುಖ್ಯ. ಪೀರಿಯಡ್ ಸಾಮಾನ್ಯವಾಗಿ ಸಂಭವಿಸದಿದ್ದರೂ, ರಕ್ತಸ್ರಾವವು ವಿಭಿನ್ನ ಕಾರಣಗಳಿಗಾಗಿ ಸಂಭವಿಸಬಹುದು. ತಪ್ಪುಕಲ್ಪನೆಗಳನ್ನು ತೆರವುಗೊಳಿಸುವ ಮೂಲಕ ಮತ್ತು ವಿಷಯಗಳನ್ನು ಸ್ಪಷ್ಟವಾಗಿ ವಿವರಿಸುವ ಮೂಲಕ, ನಾವು ನಮ್ಮ ಗೆಳೆಯರಿಗೆ ಪ್ರೆಗ್ನೆನ್ಸಿಯಲ್ಲಿ ಆತ್ಮವಿಶ್ವಾಸ ಹೊಂದಿದ್ದು, ಶಾಂತವಾಗಿರಲು ಆವಶ್ಯಕವಾದ ನಿಖರವಾದ ಜ್ಞಾನವನ್ನು ನೀಡಬಹುದು.