ನಿಮ್ಮ ಪೀರಿಯಡ್ ಸಮಯದಲ್ಲಿ ಉಪವಾಸ ಮಾಡುವುದು ಒಳ್ಳೆಯದೇ? – ಸಂಪೂರ್ಣವಾಗಿ ಉಪವಾಸ ಮಾಡುವುದು ಸರಿಯಲ್ಲ. ಉಪವಾಸ ಎಂಬುದು ಜನಪ್ರಿಯ ಆರೋಗ್ಯ ಪದ್ಧತಿಯಾಗಿದೆ ಮತ್ತು ವಿವಿಧ ಸಾಂಸ್ಕೃತಿಕ, ಧಾರ್ಮಿಕ ಮತ್ತು ವೈಯಕ್ತಿಕ ಕಾರಣಗಳಿಂದ ಬಂದಿದೆ. ಉಪವಾಸವು ಒಳ್ಳೆಯ ಪ್ರಯೋಜನಗಳನ್ನು ಹೊಂದಿದ್ದರೂ, ಅದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಹೆಚ್ಚುತ್ತಿದೆ. ಆದ್ದರಿಂದ, ಈ ಲೇಖನದಲ್ಲಿ ನಿಮಗಾಗಿ ಅದನ್ನು ವಿವರಿಸುತ್ತೇವೆ - ಉಪವಾಸವು ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಮುಟ್ಟಿನ ಸಮಯದಲ್ಲಿ ಉಪವಾಸದ ಪ್ರಯೋಜನಗಳಿಂದ ಹಿಡಿದು ನೀವು ಮುಟ್ಟಿನ ಸಮಯದಲ್ಲಿ ಅದನ್ನು ಮಾಡಿದರೆ ನೀವು ಪರಿಗಣಿಸಬೇಕಾದ ಉಪವಾಸ ನಿಯಮಗಳವರೆಗೆ ತಿಳಿಯೋಣ.
ಪೀರಿಯಡ್ಸ್ ಸಮಯದಲ್ಲಿ ನಿಮ್ಮ ದೇಹವನ್ನು ಅರ್ಥಮಾಡಿಕೊಳ್ಳುವುದು
ನಿಮ್ಮ ಪೀರಿಯಡ್ ಎನ್ನುವುದು ಪ್ರತಿ ತಿಂಗಳಲ್ಲಿ ಆಗುವ ತೊಂದರೆಗಿಂತ ಹೆಚ್ಚಿನದಾಗಿರುತ್ತದೆ. ಇದೊಂದು ಸಂಕೀರ್ಣ ಮತ್ತು ಪ್ರಮುಖ ಪ್ರಕ್ರಿಯೆ. ಆದರೆ ನಮ್ಮಲ್ಲಿ ಹಲವರಿಗೆ ಮುಟ್ಟಿನ ಸಮಯದಲ್ಲಿ ನಮ್ಮ ದೇಹದಲ್ಲಿ ಏನಾಗುತ್ತಿದೆ ಎಂದು ಅರ್ಥವಾಗುವುದಿಲ್ಲ. ಹಾರ್ಮೋನಲ್ ಏರುಪೇರುಗಳಿಂದ ಹಿಡಿದು ಮೂಡ್ ಸ್ವಿಂಗ್ಸ್ ಮತ್ತು ದೈಹಿಕ ಲಕ್ಷಗಳ ವರೆಗೆ, ನಿಮ್ಮ ಸೈಕಲ್ ಅನ್ನು ಅರ್ಥಮಾಡಿಕೊಳ್ಳುವುದರಿಂದ ನಿಮ್ಮ ಬಗ್ಗೆ ನೀವು ಒಳ್ಳೆಯ ಕಾಳಜಿಯನ್ನು ವಹಿಸಬಹುದು. ನೀವು ಪೀರಿಯಡ್ಸ್ ಸಮಯದಲ್ಲಿ ಉಪವಾಸ ಮಾಡಾಬೇಕೋ, ಬೇಡವೋ ನಿಮಗೇ ಚೆನ್ನಾಗಿ ಅರ್ಥವಾಗುತ್ತದೆ.
ಸೈಕಲ್ ಆದ್ಯಂತ ಉಂಟಾಗುವ ಹಾರ್ಮೋನು ಏರುಪೇರುಗಳು ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಸಂಪೂರ್ಣ ದೇಹದ ಮೇಲೆ ಪ್ರಭಾವ ಬೀರುತ್ತದೆ. ಪೀರಿಯಡ್ ಸಮಯದಲ್ಲಿ ಈಸ್ಟ್ರೋಜನ್ ನ ಕೊರತೆ ಇರುವುದರಿಂದ ಮತ್ತು ಯುಟಿರೈನ್ ಲೈನಿಂಗ್ ತೊಲಗುವುದರಿಂದ ಹೆಚ್ಚಿನ ಶಕ್ತಿ ಬೇಕಾಗುತ್ತದೆ, ಇದರಿಂದಾಗಿ ನಿಮಗೆ ಆ ಸಮಯದಲ್ಲಿ ಹೆಚ್ಚಿನ ಆಯಾಸ ಮತ್ತು ಯಾವುದೇ ಕೆಲಸ ಮಾಡಬಾರದು ಅನಿಸುತ್ತದೆ. ನಿಮ್ಮ ದೇಹವು ಶಕ್ತಿಯನ್ನು ಸಂಗ್ರಹಿಸುವ ಮೂಲಕ ಸಂಭಾವ್ಯ ಪ್ರೆಗ್ನೆನ್ಸಿಗೆ ಸಿದ್ಧವಾಗುವುದರಿಂದ, ವಿಶೇಷವಾಗಿ ಲ್ಯೂಟಲ್ ಫೇಸ್ ನಲ್ಲಿ ಉಂಟಾಗುವ ಹಾರ್ಮೋನಲ್ ಬದಲಾವಣೆಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಸಿಹಿತಿಂಡಿಗಳಿಗಾಗಿ ಕ್ರೇವಿಂಗ್ಸ್ ಉಂಟುಮಾಡಬಹುದು. ಈ ಏರಿಳಿತದ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಮಟ್ಟಗಳು ಸಿರೊಟೋನಿನ್ ಮತ್ತು ಡೋಪಮೈನ್ನಂತಹ ನ್ಯೂರೋಟ್ರಾನ್ಸ್ಮೀಟರ್ಗಳ ಮೇಲೆ ಪ್ರಭಾವ ಬೀರುತ್ತವೆ, ಇದು ಸಾಮಾನ್ಯವಾಗಿ ಮೂಡ್ ಸ್ವಿಂಗ್ಸ್ ಮತ್ತು ಕಿರಿಕಿರಿಗೆ ಕಾರಣವಾಗುತ್ತದೆ. ಇದು ಉಪವಾಸವನ್ನು ಸಾಮಾನ್ಯಕ್ಕಿಂತ ಸ್ವಲ್ಪ ಕಷ್ಟಕರವಾಗಿಸುತ್ತದೆ.
ಯುಟಿರಸ್ ಸಂಕುಚಿತಗೊಳ್ಳುವುದರಿಂದ ಪೀರಿಯಡ್ ನೋವು ಉಂಟಾಗುತ್ತದೆ, ಮತ್ತು ಬ್ಲೀಡಿಂಗ್ ಮುಂದುವರಿದಾಗ, ಬೆನ್ನು ನೋವು, ತಲೆನೋವು ಮತ್ತು ಸ್ತನ ನೋವು ಮುಂತಾದ ಲಕ್ಷಣಗಳು ಕಡಿಮೆಯಾಗುತ್ತವೆ. ಅನೇಕ ಮಹಿಳೆಯರು ಓವ್ಯುಲೇಶನ್ ನಂತರ ಶಕ್ತಿಯುತರಾಗಿದ್ದೇವೆ ಮತ್ತು ಮೂಡ್ ಸಹ ಉತ್ತಮವಾಗಿದೆ ಎಂದು ತಿಳಿಸುತ್ತಾರೆ. ಏನೇ ಇರಲಿ, ಪೀರ್ಯಡ್ ನ ಲಕ್ಷಣಗಳು ಮತ್ತು ದೇಹದಲ್ಲಿನ ಬದಲಾವಣೆಗಳು ಪೀರಿಯಡ್ ನ ಒಂದು ಅಥವಾ ಎರಡು ವಾರಗಳ ಮೊದಲು ಸಂಭವಿಸಬಹುದು, ಇದನ್ನು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಎಂದು ಕರೆಯಲಾಗುತ್ತದೆ. PMS ವಿಶ್ವಾದ್ಯಂತ ಯುವತಿಯರು ಹೆಚ್ಚು ಅನುಭವಿಸುವ ಪೀರಿಯಡ್ ಲಕ್ಷಣಗಳಲ್ಲಿ ಒಂದಾಗಿದೆ.
ಉಪವಾಸವು ನಿಮ್ಮ ಮುಟ್ಟಿನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಯಾವುದೇ ಇಬ್ಬರು ಮಹಿಳೆಯರಿಗೆ ಪೀರಿಯಡ್ ಸಮಯದಲ್ಲಿ ಒಂದೇ ರೀತಿಯ ಅನುಭವವಿರುವುದಿಲ್ಲ. ಪ್ರತಿಯೊಬ್ಬ ಮಹಿಳೆಗೂ ಮುಟ್ಟಿನ ಲಕ್ಷಣಗಳು, ಸೈಕಲ್ ಮತ್ತು ಆರೋಗ್ಯ ಮತ್ತು ಯೋಗಕ್ಷೇಮ ಬದಲಾಗುತ್ತದೆ. ಅದಕ್ಕಾಗಿಯೇ ಮುಟ್ಟಿನ ಸಮಯದಲ್ಲಿ ಉಪವಾಸವು ವ್ಯಕ್ತಿಯ ಆರೋಗ್ಯ ಮತ್ತು ಮುಟ್ಟಿನ ಅನುಭವವನ್ನು ಅವಲಂಬಿಸಿರುತ್ತದೆ. ಉಪವಾಸವು ದೇಹವನ್ನು ಶುದ್ಧೀಕರಿಸುವುದು, ಶಕ್ತಿಯನ್ನು ಹೆಚ್ಚಿಸುವುದು ಮತ್ತು ಮೈಂಡ್ಫುಲ್ನೆಸ್ ಅನ್ನು ಉತ್ತೇಜಿಸುವಂತಹ ಪ್ರಯೋಜನಗಳನ್ನು ಹೊಂದಿದೆ. ಆದಾಗ್ಯೂ, ಮುಟ್ಟಿನ ಸಮಯದಲ್ಲಿ ಇದನ್ನು ಅಭ್ಯಾಸ ಮಾಡುವುದರಿಂದ ಕೆಲವು ಮಹಿಳೆಯರಿಗೆ ನ್ಯೂಟ್ರಿಶನ್ ಲೆವೆಲ್ಸ್ ನಲ್ಲಿ ಇಳಿಕೆ ಕಂಡುಬರುತ್ತದೆ. ನ್ಯೂಟ್ರಿಶನ್ ಅಗತ್ಯವಿರುವ ಮತ್ತು ವಿಶೇಷ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ಮಹಿಳೆಯರಿಗೆ ಇದರಿಂದ ಹೆಚ್ಚು ಅಪಾಯವಾಗುತ್ತದೆ.
ಮೊದಲೇ ಪೀರಿಯಡ್ಸ್ ಸಮಯವೆಂದರೆ ಕಠಿಣ ಸಮಯವಾಗಿದ್ದು, ಆಯಾಸ, ನೋವು, ಮೂಡ್ ಸ್ವಿಂಗ್ಸ್ ಮತ್ತು ಎನರ್ಜಿ ಲೆವೆಲ್ಸ್ ಕುಸಿತಗಳು ಇರುತ್ತವೆ. ಈ ಸಮಯದಲ್ಲಿ ಉಪವಾಸ ಮಾಡುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮ ಅಪಾಯಕ್ಕೆ ಸಿಲುಕುತ್ತದೆ. ಮುಟ್ಟಿನ ಸಮಯದಲ್ಲಿ ನೀವು ಉಪವಾಸ ಮಾಡುವಾಗ ನಿಮ್ಮ ದೇಹವು ಅನುಭವಿಸುವ ಸಾಮಾನ್ಯ ಪರಿಣಾಮಗಳು ಇಲ್ಲಿವೆ:
-
ಎನರ್ಜಿ ಲೆವೆಲ್ಸ್ ನಲ್ಲಿ ಬದಲಾವಣೆ
ದೀರ್ಘ ಕಾಲದ ವರೆಗೆ ಉಪವಾಸ ಮಾಡುವುದರಿಂದ ನಿಮ್ಮ ದೇಹವು ಸಾಮಾನ್ಯಕ್ಕಿಂತ ಬೇಗನೆ ಡ್ರೆಯಿನ್ ಆಗಿಬಿಡುತ್ತದೆ. ಮುಟ್ಟಿನ ಸಮಯದಲ್ಲಿ, ನಿಮ್ಮ ದೇಹವು ಹಾರ್ಮೋನಲ್ ಇಂಬ್ಯಾಲೆನ್ಸ್ ಅನ್ನು ನಿರ್ವಹಿಸಲು ತುಂಬಾ ಕಷ್ಟ ಪಡುತ್ತಿರುತ್ತದೆ. ಅದಕ್ಕೆ ಉಪವಾಸವನ್ನು ಸೇರಿಸಿ, ಆಹಾರವನ್ನು ಪೂರ್ತಿಯಾಗಿ ತೆಗೆದುಕೊಳ್ಳದಿದ್ದರೆ, ಆಗಲೆ ಹೇಳಿದಂತೆ ಇದು ಬಳಲಿಕೆಗೆ ಕಾರಣವಾಗಬಹುದು.
-
ಕ್ರೇವಿಂಗ್ಸ್
ಪೀರಿಯಡ್ಸ್ ಸಮಯದಲ್ಲಿ ನಿಮ್ಮ ದೇಹವು ನಿರ್ದಿಷ್ಟ ಪೋಷಕಾಂಶಗಳಿಗಾಗಿ ಬಯಸುತ್ತಿರುತ್ತದೆ. ದೇಹದಲ್ಲಿ ಉಂಟಾಅಗುವ ಹಾರ್ಮೋನಲ್ ಬದಲಾವಣೆಗಳಿಂದಾಗಿ ಹಸಿವು ಹೆಚ್ಚಾಗುತ್ತದೆ, ಹಾಗಾಗಿ ಆಹಾರ ತೆಗೆದುಕೊಳ್ಲದೇ ಇದ್ದರೆ ಕ್ರೇವಿಂಗ್ಸ್ ಇನ್ನಷ್ಟು ಹೆಚ್ಚಾಗುತ್ತವೆ, ಈ ಕಾರಣದಿಂದ ನೀವು ಹೆಚ್ಚು ಹೆಚ್ಚು ತಿನ್ನುವಂತಾಗುತ್ತದೆ.
-
ಹಾರ್ಮೋನಲ್ ಬ್ಯಾಲೆನ್ಸ್
ಮುಟ್ಟಿನ ಸಮಯದಲ್ಲಿ ನಿಮ್ಮ ಹಾರ್ಮೋನುಗಳು ಏರುಪೇರಗುತ್ತವೆ, ಹಾಗಾಗಿ ಈ ಉಪವಾಸವು ಹಾರ್ಮೋನಲ್ ಇಂಬ್ಯಾಲೆನ್ಸ್ ಗಳನ್ನು ಹೆಚ್ಚಿಸುತ್ತದೆ. ಆಗಾಗ್ಗೆ ದೀರ್ಘಕಾಲದ ಉಪವಾಸ ಮಾಡಿದರೆ, ಕೆಲವೊಮ್ಮೆ ಅದು ಇರೆಗ್ಯುಲರ್ ಅಥವಾ ಮಿಸ್ ಆಗುವ ಪೀರಿಯಡ್ಸ್ ಗೆ ಕಾರಣವಾಗಬಹುದು, ಏಕೆಂದರೆ ನಿಮ್ಮ ದೇಹವು ಶಕ್ತಿಯನ್ನು ಆಹಾರದ ಕೊರತೆಯನ್ನು ಉಳಿಸುವ ಸಂಕೇತವಾಗಿ ಭಾವಿಸಬಹುದು.
ಪೀರಿಯಡ್ಸ್ ಸಮಯದಲ್ಲಿ ಉಪವಾಸ ಮಾಡುವುದರಿಂದ ಆಗುವ ಪ್ರಯೋಜನಗಳು
ಮತ್ತೊಂದೆಡೆ, ಕೆಲವು ಮಹಿಳೆಯರು ತಮ್ಮ ಪೀರಿಯಡ್ ಸಮಯದಲ್ಲಿಯೂ ಸಹ ಉಪವಾಸ ಮಾಡುವಾಗ ಒಳ್ಳೆಯ ಮೆಂಟಲ್ ಕ್ಲಾರಿಟಿ ಹೊಂದಿರುತ್ತಾರೆ. ಇಂಟೆರ್ಮಿಟೆಂಟ್ ಫಾಸ್ಟಿಂಗ್ ನಂತಹ ಅಲ್ಪಾವಧಿಯ ಉಪವಾಸಗಳು ಸಾಮಾನ್ಯವಾಗಿ ನಿಮ್ಮ ಪೀರಿಯಡ್ ಅನ್ನು ಅಡ್ಡಿಪಡಿಸುವುದಿಲ್ಲ ಮತ್ತು ಕೆಲವೊಮ್ಮೆ ಇದರಿಂದಾಗಿ ಲೈಟ್ ಆದ, ಕಡಿಮೆ ನೋವಿನ ಮುಟ್ಟಿನ ಚಕ್ರವಿರಬಹುದು. ಮುಟ್ಟಿನ ಸಮಯದಲ್ಲಿ ಉಪವಾಸವು ಕಠಿಣವೆನಿಸುತ್ತದೆ, ಆದರೆ ಅದು ಅಷ್ಟು ಕೆಟ್ಟದ್ದಲ್ಲ. ನೀವು ಅದನ್ನು ಹೇಗೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ, ಇದು ಕೆಲವು ಪ್ರಯೋಜನಗಳಿಗೂ ಕಾರಣವಾಗುತ್ತದೆ.
-
ಡಿಟಾಕ್ಸಿಫಿಕೇಶನ್
ಉಪವಾಸವು ಫ್ಯಾಟ್ ಸೆಲ್ಸ್ ನಲ್ಲಿ ಸಂಗ್ರಹವಾಗಿರುವ ಟಾಕ್ಸಿಗಳನ್ನು ಒಡೆಯಲು ಪ್ರೋತ್ಸಾಹಿಸುವ ಮೂಲಕ ನಿಮ್ಮ ದೇಹವನ್ನು ಡಿಟಾಕ್ಸಿಫೈ ಮಾಡಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು, ಮುಟ್ಟಿನ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರು ಬ್ಲೋಟಿಂಗ್ ಮತ್ತು ಅಸ್ವಸ್ಥತೆಯನ್ನು ಕೆಲವೊಮ್ಮೆ ಕಡಿಮೆ ಮಾಡುತ್ತದೆ.
-
ಉರಿಯೂತದಲ್ಲಿ ಕಡಿತ
ವ್ಯಕ್ತಿಯ ವೈಯಕ್ತಿಕ ಆಯ್ಕೆಯಂತೆ, ಪೀರಿಯಡ್ಸ್ ಸಮಯದಲ್ಲಿ ಉಪವಾಸ ಮಾಡುವುದು ನೋವುಗಳು ಮತ್ತು ಮೈ ನೋವುಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದರೆ ಇದು ಒಂದು ವ್ಯಕ್ತಿಯ ವೈಯಕ್ತಿಕ ಆಯ್ಕೆ ಆದ್ದರಿಂದ, ಕೆಲವರಲ್ಲಿ ಇದು ನೋವನ್ನು ಇನ್ನಷ್ಟು ಹೆಚ್ಚಾಗಿಸಬಹುದು.
-
ಸುಧಾರಿತ ಜೀರ್ಣಕ್ರಿಯೆ
ಋತುಚಕ್ರದ ಸಮಯದಲ್ಲಿ ಜೀರ್ಣಕ್ರಿಯೆಗೆ ತೊಂದರೆ ಅನುಭವಿಸುವ ಮಹಿಳೆಯರಿಗೆ, ಉಪವಾಸವು ಜೀರ್ಣಾಂಗ ವ್ಯವಸ್ಥೆಗೆ ಅಗತ್ಯವಾದ ವಿಶ್ರಾಂತಿಯನ್ನು ನೀಡುತ್ತದೆ. ಇದು ಉಬ್ಬುವುದು, ಗ್ಯಾಸ್ ಮತ್ತು ಇತರ ಜಠರಗರುಳಿನ ಅಸ್ವಸ್ಥತೆಗಳಿಗೆ ಸಹಾಯ ಮಾಡುತ್ತದೆ.
-
ಮೈಂಡ್ಫುಲ್ನೆಸ್ ಮತ್ತು ನಿಯಂತ್ರಣ
ಉಪವಾಸವು ಮೈಂಡ್ಫುಲ್ನೆಸ್ ಮತ್ತು ನೀವು ನಿಮ್ಮ ದೇಹಕ್ಕೆ ಏನು ಹಾಕುತ್ತೀರಿ ಎಂಬುದರ ಮೇಲೆ ನಿಯಂತ್ರಣವನ್ನು ಉತ್ತೇಜಿಸುತ್ತದೆ. ಇದು ಉಪವಾಸದ ನಂತರ ಉತ್ತಮ ಆಹಾರ ಪದ್ಧತಿಗೆ ಕಾರಣವಾಗುತ್ತದೆ, ಎಚ್ಚರಿಕೆಯಿಂದ ಮಾಡಿದಾಗ ಶುಗರ್ ಕ್ರೇವಿಂಗ್ಸ್ ಮತ್ತು ಪ್ರೊಸೆಸ್ಡ್ ಫುಡ್ ಸೇವನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಸಾಮಾನ್ಯವಾಗಿ PMS ಲಕ್ಷಣಗಳನ್ನು ಉಲ್ಬಣಗೊಳಿಸುತ್ತದೆ.
ನಿಮ್ಮ ಪೀರಿಯಡ್ಸ್ ಸಮಯದಲ್ಲಿ ಉಪವಾಸ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ನಿಯಮಗಳು
ನಿಮ್ಮ ಪೀರಿಯಡ್ ಸಮಯದಲ್ಲಿ ಉಪವಾಸವನ್ನು ಮುಂದುವರಿಸಲು ಅಥವಾ ಪ್ರಾರಂಭಿಸಲು, ಆರೋಗ್ಯವಾಗಿರಲು ಮತ್ತು ಉಪವಾಸವು ಉತ್ತಮವಾಗಿರಲು ಕೆಲವು ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ನಿಮ್ಮ ಪೀರಿಯಡ್ ಸಮಯದಲ್ಲಿ ಮೈಂಡ್ಫುಲ್ ಆಗಿ ಉಪವಾಸ ಮಾಡುವ ಮೂಲಕ ನೀವು ಈ ಪರಿಸ್ಥಿತಿಯನ್ನು ಒ ಪರಿಣಾಮ ಬೀರುವಂತೆ ಪರಿವರ್ತಿಸಬಹುದು. ಈ ಪ್ರಕ್ರಿಯೆಯು ನಿಮ್ಮನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಉಪವಾಸದ ಸಮಯದಲ್ಲಿ ನೀವು ಬಲವಾಗಿರಲು ಅನುವು ಮಾಡಿಕೊಡುತ್ತದೆ.
-
ಹೈಡ್ರೇಟ್ ಆಗಿರಿ
ನಿಮ್ಮ ಪೀರಿಯಡ್ ಸಮಯದಲ್ಲಿ ಉಪವಾಸ ಮಾಡುವಾಗ ಒಂದು ಬಹಳ ಮುಖ್ಯವಾದದು ಎಂದರೆ ಸಾಕಷ್ಟು ನೀರು ಕುಡಿಯುವುದು. ಡೀಹೈಡ್ರೇಶನ್ ನಿಂದಾಗಿ ತಲೆನೋವು ಮತ್ತು ನೋವು ಉಂಟಾಗಬಹುದು ಮತ್ತು ಮೂಡ್ ಅನ್ನು ಇನ್ನಷ್ಟು ಹದಗೆಡಿಸುತ್ತದೆ, ಆದ್ದರಿಂದ ನಿಮ್ಮ ದೇಹವನ್ನು ಚೆನ್ನಾಗಿ ಹೈಡ್ರೇಟ್ ಮಾಡಿಕೊಳ್ಳುವುದು ಉತ್ತಮ.
-
ನಿಮ್ಮ ಉಪವಾಸದ ಅವಧಿಯನ್ನು ಕಡಿಮೆ ಮಾಡಿಕೊಳ್ಳಿ
ನೀವು ದೀರ್ಘಾವಧಿಯವರೆಗೆ ಉಪವಾಸ ಮಾಡುತ್ತಿದ್ದರೆ, ಕಡಿಮೆ ಸಮಯದವರೆಗೆ ಮಾಡುವುದನ್ನು ಪರಿಗಣಿಸಿ, ನಿಮ್ಮ ದೇಹವು ಸ್ವಲ್ಪ ಸಮಯ ರಿಫ್ಯೂಲ್ ಮಾಡಲು ಅವಕಾಶ ಮಾಡಿಕೊಡಿ. 16 ಅಥವಾ 18 ಗಂಟೆಗಳ ಬದಲಿಗೆ, 12 ಗಂಟೆಗಳ ಕಾಲ ಆಹಾರ ವಿಲ್ಲದೆ ಇರುವ ಇಂಟರ್ಮಿಟೆಂಟ್ ಫಾಸ್ಟಿಂಗ್ ಅನ್ನು ಆರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.
-
ನ್ಯೂಟ್ರಿಯೆಂಟ್-ರಿಚ್ ಫುಡ್ಸ್ ತೆಗೆದುಕೊಳ್ಳಿ
ನೀವು ಊಟ ಮಾಡುವಾಗ, ನ್ಯೂಟ್ರಿಯೆಂಟ್-ರಿಚ್ ಫುಡ್ಗಳತ್ತ ಗಮನ ಹರಿಸಿ. ಕಳೆದುಹೋದ ರಕ್ತವನ್ನು ತುಂಬಲು ಸೊಪ್ಪು ಪಲ್ಯಗಳು ಮತ್ತು ಬೇಳೆಕಾಳುಗಳಂತಹ ಐರನ್-ರಿಚ್ ಆಹಾರಗಳನ್ನು ಮತ್ತು ಮಜಿಲ್ ಕ್ರಾಂಪ್ಸ್ ಅನ್ನು ಕಡಿಮೆ ಮಾಡಲು ಡಾರ್ಕ್ ಚಾಕೊಲೇಟ್ ಅಥವಾ ಬಾಳೆಹಣ್ಣುಗಳಂತಹ ಮೆಗ್ನೀಸಿಯಮ್ ರಿಚ್ ಆಹಾರಗಳನ್ನು ಸೇರಿಸಿ.
-
ನಿಮ್ಮ ಹ ಹೇಳುವುದನ್ನು ಕೇಳಿ
ಈ ಸಮಯದಲ್ಲಿ ನಿಮ್ಮ ದೇಹಕ್ಕೆ ಏನು ಅನಿಸುತ್ತಿದೆ ಎಂಬುದರ ಬಗ್ಗೆ ಗಮನ ಕೊಡಿ. ಅದು ನಿಮ್ಮನ್ನು ದುರ್ಬಲಗೊಳಿಸುತ್ತಿದ್ದರೆ ಅಥವಾ ನಿಮ್ಮ ರೋಗಲಕ್ಷಣಗಳನ್ನು ಹದಗೆಡಿಸುತ್ತಿದ್ದರೆ, ಅದು ನಿಮ್ಮ ಉಪವಾಸವನ್ನು ವಿರಾಮಗೊಳಿಸಲು ಅಥವಾ ಮಾರ್ಪಡಿಸಲು ಸೂಚನೆಯಾಗಿದೆ. ಈ ಸಮಯದಲ್ಲಿ ನಿಮ್ಮ ದೇಹಕ್ಕೆ ಹೆಚ್ಚುವರಿ ಕಾಳಜಿಯ ಅಗತ್ಯವಿದೆ.
-
ಪ್ರೊಫೆಶನಲ್ ಅನ್ನು ಸಂಪರ್ಕಿಸಿ
ನಿಮಗೆ ಅನೀಮಿಯಾ ಅಥವಾ PCOS (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ನಂತಹ ಮೊದಲೇ ಇರುವ ಆರೋಗ್ಯ ಸಮಸ್ಯೆಗಳಿದ್ದರೆ, ನಿಮ್ಮ ಪೀರಿಯಡ್ ಸಮಯದಲ್ಲಿ ಉಪವಾಸ ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಅವರ ವೈಯಕ್ತಿಕ ಮಾರ್ಗದರ್ಶನದೊಂದಿಗೆ, ನೀವು ಅದನ್ನು ಮುಂದುವರಿಸಬಹುದು ಅಥವಾ ವಿರಾಮಗೊಳಿಸಬಹುದು.
ಉಪವಾಸವು ನಿಮ್ಮ ಮುಟ್ಟಿನ ಆರೋಗ್ಯವನ್ನು ಸುಧಾರಿಸುತ್ತದೆಯೇ ಅಥವಾ ಇನ್ನಷ್ಟು ದುರ್ಬಲವಾಗಿಸುತ್ತದೆಯೇ?
ಉಪವಾಸವು ಆರೋಗ್ಯವನ್ನು ಸುಧಾರಿಸುತ್ತದೆಯೇ ಅಥವಾ ಹದಗೆಡಿಸುತ್ತದೆಯೇ ಎಂಬುದಕ್ಕೆ ಒಂದೇ ರೀತಿಯ ಉತ್ತರವಿಲ್ಲ. ಆದಾಗ್ಯೂ, ಕೆಲವು ಮಹಿಳೆಯರು ಇದನ್ನು ನಿಭಾಯಿಸುವುದು ಸುಲಭ ಎಂದು ಭಾವಿಸುತ್ತಾರೆ ಮತ್ತು ತಮ್ಮ ಪೀರಿಯಡ್ ಸಮಯದಲ್ಲಿ ಉಪವಾಸದಿಂದ ಪ್ರಯೋಜನ ಪಡೆಯಬಹುದು, ಇದು ಬ್ಲೋಟಿಂಗ್ ಅನ್ನು ಕಡಿಮೆ ಮಾಡುತ್ತದೆ ಅಥವಾ ಲೈಟ್ ಆದ ಬ್ಲೀಡಿಂಗ್ ಆಗುವಂತೆ ಮಾಡುತ್ತದೆ. ಅದೇ ಸಮಯದಲ್ಲಿ, ಹೆಚ್ಚಿದ ಆಯಾಸ, ನೋವು ಮತ್ತು ದೈಹಿಕ ಅಸ್ವಸ್ಥತೆಯಂತಹ ಕೆಟ್ಟ ಲಕ್ಷಣಗಳಿಂದಾಗಿ, ಕೆಲವು ಮಹಿಳೆಯರಿಗೆ ಇದು ಕಠಿಣವೆನಿಸಬಹುದು.
ಇಲ್ಲಿ ಮುಖ್ಯ ವಿಷಯವೇನಂದರೆ ಮಿತವಾಗಿರುವುದು. ಇಂಟಾರ್ಮಿಟೇಂಟ್ ಫಾಸ್ಟಿಂಗ್ ಅಥವಾ ಕಡಿಮೆ ಅವಧಿಯ ಉಪವಾಸದ ಅವಧಿಗಳು ಸಾಮಾನ್ಯವಾಗಿ ಹೆಚ್ಚು ಸಹನೀಯವಾಗಿರುತ್ತವೆ ಮತ್ತು ದೀರ್ಘಾವಧಿಯ ಉಪವಾಸಕ್ಕಿಂತ ಮುಟ್ಟಿನ ಆರೋಗ್ಯದ ಮೇಲೆ ಪಾಜಿಟಿವ್ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇರುತ್ತದೆ. ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ಸಮತೋಲನಗೊಳಿಸಲು ನಿಮ್ಮ ದೇಹಕ್ಕೆ ಸಾಕಷ್ಟು ಇಂಧನ ಬೇಕಾಗುತ್ತದೆ ಎಂಬುದನ್ನು ನೆನಪಿಡಿ.
ಓಟ್ಟಿನಲ್ಲಿ ನೋಡಿದರೆ
ಉಪವಾಸ ಮಾಡಬೇಕೆ ಅಥವಾ ಬೇಡವೇ ಎಂಬುದು ಸಾಂಸ್ಕೃತಿಕ, ಧಾರ್ಮಿಕ ಮತ್ತು ವೈಯಕ್ತಿಕ ಕಾರಣಗಳ ಆಧಾರದ ಮೇಲೆ ವ್ಯಕ್ತಿಯ ಆಯ್ಕೆಯಾಗಿದೆ. ಮುಟ್ಟು ನಿಮ್ಮ ದೇಹದಲ್ಲಿ ಹಾರ್ಮೋನುಗಳ ಬ್ಯಾಲೆನ್ಸ್ ಅನ್ನು ಕಾಪಾಡಿಕೊಳ್ಳಲು ಒಂದು ನೈಸರ್ಗಿಕ ಮಾರ್ಗವಾಗಿದೆ ಮತ್ತು ಈ ಸಮಯದಲ್ಲಿ ನಿಮ್ಮ ದೇಹಕ್ಕೆ ಹೆಚ್ಚುವರಿ ಕಾಳಜಿಯನ್ನು ನೀಡುವುದು ಮುಖ್ಯ.
ಉಪವಾಸವು ಪ್ರಯೋಜನಗಳನ್ನು ಹೊಂದಿರುವುದರಿಂದ, ಮಿತವಾಗಿರುವುದು ಮುಖ್ಯ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಕೆಲವು ಮಹಿಳೆಯರು ಕಡಿಮೆಯಾದ ಲಕ್ಷಣಗಳು ಮತ್ತು ಸುಧಾರಿತ ಶಕ್ತಿಯೊಂದಿಗೆ ಆರೋಗ್ಯವಾಗಿರುತ್ತಾರೆ, ಆದರೆ ಇತರರು ಹೆಚ್ಚಿನ ನೋವು ಮತ್ತು ಆಯಾಸದೊಂದಿಗೆ ಬಳಲುತ್ತಾರೆ. ಮೈಂಡ್ಫುಲ್ ಆಗಿ ಉಪವಾಸ ಮಾಡುವುದು ಮತ್ತು ನಿಮ್ಮ ದೇಹದ ಅಗತ್ಯಗಳಿಗೆ ಅನುಗುಣವಾಗಿರುವುದು ಇಲ್ಲಿ ಬಹಳ ಮುಖ್ಯದಾದ ವಿಷಯ. ಕೊನೆಯದಾಗಿ ಒಂದು ಮುಖ್ಯ ಸಂಗತಿ, ನೀವು ನಿಮ್ಮ ಪೀರಿಯಡ್ ಸಮಯದಲ್ಲಿ ಉಪವಾಸ ಮಾಡಬೇಕೆಂದು ನಿರ್ಧರಿಸಿದರೆ, ನೀವು ಹೈಡ್ರೇಟೆಡ್ ಸ್ಥಿತಿಯಲ್ಲಿರಲು ಮರೆಯಬೇಡಿ, ನೀವು ಉಪವಾಸವನ್ನು ಪೂರ್ಣಗೊಳಿಸಿದ ನಂತರ ಆಹಾರ ಸೇವಿಸುವಾಗ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಗಳನ್ನು ನೀಡಿ ಮತ್ತು ನಿಮಗೆ ಖಚಿತವಿಲ್ಲದಿದ್ದರೆ ತಜ್ಞರನ್ನು ಸಂಪರ್ಕಿಸಿ.