ವೆಜೈನಲ್ ಡಿಶ್ಚಾರ್ಜ್ : ಯಾವುದು ಸಾಮಾನ್ಯ ಮತ್ತು ಯಾವುದು ಅಲ್ಲ ?

777
2.3 k

 

ವೆಜೈನಲ್ ಡಿಶ್ಚಾರ್ಜ್ ಎಂದರೆ ಏನು?

 

ವೆಜೈನಲ್ ಡಿಸ್ಚಾರ್ಜ್ ಎಂದರೆ ಸರ್ವಿಕ್ಸ್ ಮತ್ತು ವೆಜೈನಾದಲ್ಲಿರುವ ಗ್ಲಾಂಡ್ಸ್ ನಿಂದ ಉತ್ಪತ್ತಿಯಾಗುವ ದ್ರವ. ಇದು ವೆಜೈನಾವನ್ನು ಸ್ವಚ್ಛವಾಗಿ ಮತ್ತು ತೇವವಾಗಿಡುವುದು, ಇನ್ಫೆಕ್ಷನ್ ಗಳನ್ನು ನಿಲ್ಲಿಸುವುದು ಮತ್ತು ಫರ್ಟಿಲಿಟಿಗೆ ಸಹಾಯ ಮಾಡುವಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ.


ಯಾವುದನ್ನು ಸಾಮಾನ್ಯ ವೆಜೈನಲ್ ಡಿಸ್ಚಾರ್ಜ್ ಎಂದು ಪರಿಗಣಿಸಲಾಗುತ್ತದೆ?

ವೆಜೈನಲ್ ಡಿಸ್ಚಾರ್ಜ್ ನಲ್ಲಿ ಸಾಮಾನ್ಯವಾದದ್ದು ಏನು ಎಂದು ತಿಳಿದುಕೊಳ್ಳುವುದು ಮಹಿಳೆಯರ ಆರೋಗ್ಯಕ್ಕೆ ಬಹಳ ಮುಖ್ಯ. ಸಾಮಾನ್ಯ ಸ್ರಾವವು ವೆಜೈನಾವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಸಾಮಾನ್ಯ ವೆಜೈನಲ್ ಡಿಸ್ಚಾರ್ಜ್ನಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ನೋಡೋಣ:

  • ಸಾಧಾರಣವಾಗಿ ಇದು ಸ್ಪಷ್ಟಾವಾಗಿ ಅಥವಾ ಬೆಳ್ಳಗೆ ಇರುತ್ತದೆ.
  • ಇದರಲ್ಲಿ ಸ್ವಲ್ಪ ವಾಸನೆ ಇರಬಹುದು, ಆದರೆ ಅದು ಹೆಚ್ಚಾಗಿ ಇರಬಾರದು.
  • ಇದು ತೆಳ್ಲಗೆ ಅಥವಾ ದಪ್ಪಗೆ ಇರಬಹುದು, ದಪ್ಪ ಹೇಗಿದ್ದರೂ ತೊಂದರೆಯಿಲ್ಲ.
  • ಇದು ವೆಜೈನಾವನ್ನು ತೇವವಾಗಿಡುತ್ತದೆ ಮತ್ತು ಇನ್ಫೆಕ್ಷನ್ ಗಳನ್ನು ನಿವಾರಿಸುತ್ತದೆ.


ವೆಜೈನಲ್ ಡಿಶ್ಚಾರ್ಜ್ ನ ಬಣ್ಣ ಏನನ್ನು ತಿಳಿಸುತ್ತದೆ?

 ವಿಜೈನಲ್ ಡಿಶ್ಚಾರ್ಜ್ ನ ಬಣ್ನವು ಸಂತಾನೋತ್ಪತ್ತಿ ಆರೋಗ್ಯದ ಕುರಿತು ನಮಗೆ ಅನೇಕ ವಿಷಯಗಳನ್ನು ಹೇಳುತ್ತದೆ. ವಿಭಿನ್ನ ಬಣ್ನಗಳು ಹೇಳುವುದೇನು ಎಂಬುದರ ಬಗ್ಗೆ ನೋಡೋಣ:

  •  ಸ್ಪಷ್ಟ ಅಥವಾ ಬಿಳಿ

ಇದು ಸಾಧಾರಣವಾಗಿ ಸಾಮಾನ್ಯವಾಗಿದೆ ಮತ್ತು ಅಲ್ಲೆಲ್ಲವೂ ಆರೋಗ್ಯವಾಗಿದೆ ಎಂದರ್ಥ.

  • ಹಳದಿ ಅಥವಾ ಹಸಿರು

ಈ ಬಣ್ನಗಳು ಕಂಡರೆ, ಅಲ್ಲಿ ಬ್ಯಾಕ್ಟಿರಿಯಲ್ ವೆಜೈನೊಸಿಸ್ ನಂತಹ ಇನ್ಫೆಕ್ಷನ್ ಇದೆ ಎಂದರ್ಥ.

  • ಗ್ರೇ

ಗ್ರೇ ಡಿಶ್ಚಾರ್ಜ್ ಎಂದರೆ ಬ್ಯಾಕ್ಟಿರಿಯಲ್ ವೆಜೈನೋಸಿಸ್ ಎಮ್ದರ್ಥ, ಇದೊಂದು ಸಾಮಾನ್ಯ ಇನ್ಫೆಕ್ಷನ್.

  • ಪಿಂಕ್ ಅಥವಾ ರೆಡ್

ನಿಮಗೆ ಪಿಂಕ್ ಅಥವಾ ರೆಡ್ ಬಣ್ನ ಕಂಡರೆ, ವಿಶೇಷವಾಗಿ ಬ್ಲೀಡಿಂಗ್ ಕೂಡ ಇದ್ದರೆ, ಅದು ಇರಿಟೇಶನ್, ಹಾರ್ಮೋನುಗಳು, ಅಥವಾ ಆರಂಭಿಕ ಪ್ರೆಗ್ನೆನ್ಸಿ ಆಗಿರುವ ಸಾಧ್ಯತೆ ಇದೆ.

  • ಬ್ರೌನ್

ಸಾಧಾರಣವಾಗಿ ಈ ಬ್ರೌನ್ ಡಿಶ್ಚಾರ್ಜ್, ನಿಮ್ಮ ಪೀರಿಯಡ್ ನ ಆರಂಭದಲ್ಲಿ ಅಥವಾ ಕೊನೆಯಲ್ಲಿ ಕಂಡರೆ ಅದು ಓಕೆ ಎನ್ನಬಹುದು. ಆದರೆ ಇದು ಹಳೆಯ ರಕ್ತದೊಂದಿಗೆ ಬೆರೆತ ಡಿಶ್ಚಾರ್ಜ್ ಆಗಿರುವ ಸಾಧ್ಯತೆ ಇದೆ, ಇದು ಇರೆಗ್ಯುಲರ್ ಬ್ಲೀಡಿಂಗ್ ನ ಸಂಕೇತವಾಗಿದೆ.

 

 

ನನ್ನ ವೆಜೈನಲ್ ಡಿಶ್ಚಾರ್ಜ್ ಬದಲಾಗಿದೆ ಎಂದರೆ, ನನಗೆ ಇನ್ಫೆಕ್ಷನ್ ಇರಬಹುದೇ?

ಎಲಾ ಸಮಯದಲ್ಲೂ ಹಾಗೆ ಆಗಿರಬೇಕು ಎಂದಿಲ್ಲ, ಆದರೆ ಕೆಲವೊಮ್ಮೆ ವೆಜೈನಲ್ ಡಿಶ್ಚಾರ್ಜ್ ಅನೇಕ ಕಾರಣಗಳಿಂದ ಉಂಟಾಗಬಹುದು. ಅದು ಹಾರ್ಮೋನುಗಳು, ಸೆಕ್ಸ್ ಅಥವಾ ನೀವು ಸೇವಿಸುವ ಔಷಧಿಯಿಂದಲೂ ಆಗಬಹುದು. ಆದರೆ ನೀವು ಇದರ ಬಗ್ಗೆ ಚಿಂತಿಸುತ್ತಿದ್ದರೆ, ಅಥವಾ ನೀವು ಯಾವುದೇ ವಿಚಿತ್ರವಾದ ತುರಿಕೆ ಅಥವಾ ಕೆಟ್ಟ ವಾಸನೆಯನ್ನು ಗಮನಿಸಿದರೆ, ನೀವು ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಅಲ್ಲಿ ಇನ್ಫೆಕ್ಷನ್ ಆಗಿದೆಯೇ ಅಥವಾ ಮತ್ತೇನಾದರೂ ಸಮಸ್ಯೆ ಆಗಿದೆಯೇ ಎಂಬುದನ್ನು ಅವರು ಪರೀಕ್ಷಿಸಿ ಹೇಳುತ್ತಾರೆ.

 

 

ಯಾವ ಇನ್ಫೆಕ್ಷನ್ಗಳು ವೆಜೈನಲ್ ಡಿಶ್ಚಾರ್ಜ್ ಅನ್ನು ಬದಲಾಯಿಸುತ್ತವೆ?

ವಿವಿಧ ಇನ್ಫೆಕ್ಷನ್ಗಳು ನಿಮ್ಮ ಯೋನಿ ಡಿಸ್ಚಾರ್ಜ್ ಅನ್ನು ಹಾಳುಮಾಡಬಹುದು, ಇದು ನಿಮ್ಮ ವೆಜೈನಾದ ಆರೋಗ್ಯದ ಸಂಭಾವ್ಯ ಸಮಸ್ಯೆಯನ್ನು ಸೂಚಿಸುತ್ತದೆ. ಈ ಇನ್ಫೆಕ್ಷನ್ಗಳನ್ನು ವಿಂಗಡಿಸೋಣ:

 

  • ಬ್ಯಾಕ್ಟಿರಿಯಲ್ ವೆಜೈನೊಸಿಸ್ (BV)

ಒಳ್ಲೆಯ ಬ್ಯಾಕ್ಟಿರಿಯಾ ಗಿಂತ ಕೆಟ್ಟಾ ಬ್ಯಾಕ್ಟಿರಿಯಾದ ಸಂಖ್ಯೆ ಹೆಚ್ಚಾದಾಗ, ಬಲವಾದ ಮೀನಿನ ವಾಸನೆಯೊಂದಿಗೆ ಒಂದು ಸಣ್ಣ, ಗ್ರೇಯಿಶ್-ವೈಟ್ ಡಿಶ್ಚಾರ್ಜ್ ಉಂಟಾಗುತ್ತದೆ. 

  • ಯೀಸ್ಟ್ ಇನ್ಫೆಕ್ಷನ್ಗಳು

ಅತಿ ಹೆಚ್ಚಿನ ಯೀಸ್ಟ್ ಇದ್ದರೆ ಇದ್ದಾಗ ಡಿಶ್ಚಾರ್ಜ್ ದಪ್ಪವಾದ, ಬಿಳಿ ಮತ್ತು ಮಂದವಾದ, ಆಗಾಗ್ಗೆ ತುರಿಕೆ ಮತ್ತು ಉರಿಯು ಇರುತ್ತದೆ. 

  • ಟ್ರೈಕೋಮೊನಿಯಾಸಿಸ್

ಈ STI ಒಂದು ನೊರೆಗಟ್ಟಿದ, ಕೆಟ್ಟ ವಾಸನೆ ಇರುವ ಹಳದಿ-ಹಸಿರು ಡಿಶ್ಚಾರ್ಜ್ ಅನ್ನು ಉಂಟುಮಾಡುತ್ತದೆ. ತುರಿಕೆ ಮತ್ತು ಇರಿಟೇಶನ್ ಸಹ ಇರಬಹುದು. 

  • ಲೈಂಗಿಕವಾಗಿ ಹರಡುವ ಸೋಂಕುಗಳು (STI)

(STI) ಗೊನೊರಿಯಾ ಮತ್ತು ಕ್ಲಮೈಡಿಯದಂತಹ ಲೈಂಗಿಕವಾಗಿ ಹರಡುವ ಸೋಂಕುಗಳು ನಿಮ್ಮ ಡಿಶ್ಚಾರ್ಜ್ ಅನ್ನು ಹಾಳುಮಾಡಬಹುದು. ಗೊನೊರಿಯಾವು ಹಳದಿ ಅಥವಾ ಹಸಿರು ಬಣ್ಣಕ್ಕೆ ತಿರುಗಬಹುದು, ಆದರೆ ಕ್ಲಮೈಡಿಯವು ಪೆಲ್ವಿಕ್ ನೋವು ಮತ್ತು ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವಿನೊಂದಿಗೆ ಅಸಹಜ ಡಿಶ್ಚಾರ್ಜ್ ಅನ್ನು ಉಂಟುಮಾಡಬಹುದು.

  • ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್ (PID)

ಸಂತಾನೋತ್ಪತ್ತಿ ಅಂಗಗಳ ಇನ್ಫೆಕ್ಷನ್, ಹೆಚ್ಚಾಗಿ ಚಿಕಿತ್ಸೆ ಪಡೆಯದ STI
ಗಳಿಂದ ಉಂಟಾಗಬಹುದು, ನಿಮ್ಮ ಡಿಶ್ಚಾರ್ಜ್ ಅನ್ನು ಬದಲಾಯಿಸಬಹುದು ಮತ್ತು ಪೆಲ್ವಿಕ್ ನೋವು ಮತ್ತು ಜ್ವರಕ್ಕೆ ಕಾರಣವಾಗಬಹುದು.


ನನಗೇಕೆ ಪ್ರತಿ ದಿನ ವೆಜೈನಲ್ ಡಿಶ್ಚಾರ್ಜ್ ಆಗುತ್ತಿದೆ ?

ನಿಮ್ಮ ವೆಜೈನಾ ತನ್ನಷ್ಟಕ್ಕೆ ತಾನು ಸ್ವಚ್ಛಮಾಡಿಕೊಳ್ಳುತ್ತದೆ, ಹಾಗಾಗಿ ಪ್ರತಿದಿನ ವೆಜೈನಲ್ ಡಿಶ್ಚಾರ್ಜ್ ಆಗುವುದು ಸಮಾನ್ಯವೇ ಆಗಿದೆ. ಈ ಡಿಶ್ಚಾರ್ಜ್ ಬ್ಯಾಕ್ಟಿರಿಯಾ ಮತ್ತು ಡೆಡ್ ಸೆಲ್ಸ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ, ಇದು ನಿಮ್ಮ ಆರೋಗ್ಯಕ್ಕೆ ಒಳ
್ಳೆಯದು. ಹಾರ್ಮೋನಲ್ ಬದಲಾವಣೆಗಳು, ಪ್ರಚೋದನೆ, ಓವ್ಯುಲೇಶನ್ ಮತ್ತು ಸ್ಟ್ರೆಸ್ ನಿಮಗೆ ಎಷ್ಟು ಡಿಶ್ಚಾರ್ಜ್ ಆಗುತ್ತೆ ಎಂಬುದರ ಮೇಲೆ ಪರಿಣಾಮ ಬೀರಬಹುದು. ಆದರೆ ಬಣ್ಣ ಅಥವಾ ವಿನ್ಯಾಸದಲ್ಲಿ ಬದಲಾವಣೆ ಇದ್ದರೆ ಅಥವಾ ಕೆಟ್ಟ ವಾಸನೆಯನ್ನು ಹೊಂದಿದ್ದರೆ, ಅಥವಾ ನಿಮಗೆ ತುರಿಕೆ ಅಥವಾ ಅನಾನುಕೂಲವಾಗಿದ್ದರೆ, ಎಲ್ಲವೂ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

 

 

ನನ್ನ ವೆಜೈನಲ್ ಡಿಶ್ಚಾರ್ಜ್ ವಾಸನೆ ಬರುತ್ತಾ?

ಕೆಲವೊಮ್ಮೆ ವೆಜೈನಲ್ ಡಿಶ್ಚಾರ್ಜ್ ಗೆ ವಾಸನೆ ಇರಬಹುದು. ಇದು ನಿಮ್ಮ ಹಾರ್ಮೋನುಗಳು, ಡಯಟ್ ಅಥವಾ ಸೆಕ್ಸ್ ನಿಂದ ಉಂಟಾಗಬಹುದು. ಆದರೆ ವಾಸನೆಯು ಬಲವಾದ, ಮೀನಿನಂಥದ್ದಾದರೆ ಅಥವಾ ಕೆಟ್ಟದಾಗಿದ್ದರೆ, ಬ್ಯಾಕ್ಟೀರಿಯಾದ ವೆಜೈನೋಸಿಸ್ ಅಥವಾ ಲೈಂಗಿಕವಾಗಿ ಹರಡುವ ಸೋಂಕಿನಂತಹ ಇನ್ಫೆಕ್ಷನ್ ಇದೆ ಎಂದು ತಿಳಿಯಬೇಕು. ನೀವು ಬಲವಾದ ವಾಸನೆಯನ್ನು ಗಮನಿಸಿದರೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಸ್ವಚ್ಛವಾಗಿಟ್ಟುಕೊಳ್ಳುವುದು, ಬ್ರೀತಬಲ್ ಅಂದಾವೇರ್ ಅನ್ನು ಧರಿಸುವುದು ಮತ್ತು ಪರಿಮಳಯುಕ್ತ ಉತ್ಪನ್ನಗಳನ್ನು ತಪ್ಪಿಸುವುದರಿಂದ ಕೆಳಗೆ ಫ್ರೆಶ್ ಆಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.


ನಿಮ್ಮ ವಿಜೈನಾವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ವೈಜೈನಲ್ ಡಿಶ್ಚಾರ್ಜ್ ವಿಷಯದಲ್ಲಿ ಯಾವುದು ಸಾಮಾನ್ಯ ಯಾವುದು ಸಾಮಾನ್ಯವಲ್ಲ ಎಂದು ತಿಳಿದುಕೊಳ್ಳುವುದು ತುಂಬಾ ತುಂಬಾ ಮುಖ್ಯವಾದದು. ಯಾವುದು ಸರಿ, ಯಾವುದು ಸರಿಯಲ್ಲ ಎಂದು ತಿಳಿಯುವ ಮೂಲಕ, ನೀವು ಯಾವುದೇ ತೊಂದರೆಗಳನ್ನು ಬೇಗನೆ ಅರ್ಥಮಾಡಿಕೊಂಡು, ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಬಹುದು. ಈರೀತಿ, ಈ ರೀತಿಯಾಗಿ, ನೀವು ನಿಮ್ಮ ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಚೆನ್ನಾಗಿರಬಹುದು.