ವಿಳಂಬವಾದ ಪೀರಿಯಡ್ ಎಮೋಶನಲ್ ರೋಲರ್ ಕೋಸ್ಟರ್ನಂತೆ ಅನಿಸಬಹುದು, ಸ್ಟ್ರೆಸ್ ಮತ್ತು ಲೆಕ್ಕವಿಲ್ಲದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಇದು ಪ್ರೆಗ್ನೆನ್ಸಿಯೇ? ಆಗಿರಬಹುದು - ಆದರೆ ಅದು ಮಾತ್ರವೇ ಏಕೈಕ ಸಾಧ್ಯತೆಯಲ್ಲ. ಪ್ರೆಗ್ನೆನ್ಸಿ ಎಂಬುದು ಸಾಮಾನ್ಯವಾಗಿ ಮೊದಲ ಊಹೆಯಾಗಿದ್ದರೂ, ನಿಮ್ಮ ಸೈಕಲ್ ಅನಿರೀಕ್ಷಿತವಾಗಿ ದಾರಿ ತಪ್ಪಲು ಹಲವು ಕಾರಣಗಳಿವೆ.
1. ಸ್ಟ್ರೆಸ್ : ಇದೊಂದು ಸೈಲೆಂಟ್ ಸೈಕಲ್ ಡಿಸ್ರಪ್ಟರ್
ಸ್ಟ್ರೆಸ್ ನಿಂದ ಕಾರ್ಟಿಸೋಲ್ ಮಟ್ಟವು ಹೆಚ್ಚಾಗುವುದರಿಂದ ಪೀರಿಯಡ್ ಸೈಕಲ್ ಅನ್ನು ಗಮನಾರ್ಹವಾಗಿ ಅಡ್ಡಿಪಡಿಸಬಹುದು.
- ಕಾರ್ಟಿಸೋಲ್ ಸಂತಾನೋತ್ಪತ್ತಿ ಹಾರ್ಮೋನುಗಳನ್ನು ನಿಯಂತ್ರಿಸುವ ಹೈಪೋಥಲಾಮಿಕ್-ಪಿಟ್ಯುಟರಿ-ಗೊನಾಡಲ್ (HPG) ಆಕ್ಸಿಸ್ ನಲ್ಲಿ ಅಡ್ಡಪಡಿಸುತ್ತದೆ. ಈ ಅಡ್ಡಿಪಡಿಸುವುದು ಅನಿಯಮಿತ ಪೀರಿಯಡ್ ಸೈಕಲ್ಸ್, ಪೀರಿಯಡ್ ಫ್ಲೋನಲ್ಲಿ ಬದಲಾವಣೆಗಳು ಅಥವಾ ಪೀರಿಯಡ್ ಮಿಸ್ ಆಗುವುದಕ್ಕೆ ಕಾರಣವಾಗಬಹುದು.
- ದೀರ್ಘಕಾಲದ ಸ್ಟ್ರೆಸ್ ಮತ್ತು ಹೆಚ್ಚಿದ ಕಾರ್ಟಿಸೋಲ್ ಮಟ್ಟಗಳು ಹಾರ್ಮೋನಲ್ ಬ್ಯಾಲೆನ್ಸ್ ಅನ್ನು ಅಡ್ಡಿಪಡಿಸಬಹುದು, ಇದು ಇರೆಗ್ಯುಲರ್ ಪೀರಿಯಡ್ ಫ್ಲೋ, ಫರ್ಟಿಲಿಟಿ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
- ಯೋಗ, ಧ್ಯಾನ, ಅಥವಾ ರೆಗ್ಯುಲರ್ ಫಿಜಿಕಲ್ ಎಕ್ಸರ್ಸೈಜ್ ನಂತಹ ಸ್ಟ್ರೆಸ್-ಕಡಿಮೆ ಮಾಡುವ ಚಟುವಟಿಕೆಗಳು ಸ್ಟ್ರೆಸ್ ಮೇನೇಜ್ ಮಾಡುವುದರಲ್ಲಿ ಮತ್ತು ಹಾರ್ಮೋನಲ್ ಬ್ಯಾಲೆನ್ಸ್ ಅನ್ನು ಪ್ರಮೋಟ್ ಮಾಡುವುದರಲ್ಲಿ ಸಹಾಯ ಮಾಡುತ್ತದೆ.
ಲೈಟ್ ಸ್ಟ್ರೆಚ್ಗಳು ಮತ್ತು ಯೋಗ ಸ್ಟ್ರೆಸ್ ಮತ್ತು ಹಾರ್ಮೋನಲ್ ಬ್ಯಾಲೆನ್ಸ್ ಅನ್ನು ಪ್ರಮೋಟ್ ಮಾಡುತ್ತದೆ.
2. ತೂಕದ ಏರಿಳಿತಗಳು: ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ
ತೂಕದಲ್ಲಿನ ಬದಲಾವಣೆಯು ನಿಮ್ಮ ಮುಟ್ಟಿನ ಚಕ್ರದಲ್ಲಿ ಬದಲಾವಣೆಯನ್ನು ಉಂಟುಮಾಡಬಹುದು.
- ದೇಹದಲ್ಲಿ ಕಡಿಮೆ ಕೊಬ್ಬಿನಂಶವಿದ್ದರೆ, ಮುಟ್ಟಿನ ಚಕ್ರದ ಮೇಲೆ ಪ್ರಭಾವ ಬೀರುವ ಲೆಪ್ಟಿನ್ ಎಂಬ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದು ಓವ್ಯುಲೇಶನ್ ಅನ್ನು ಪ್ರತಿಬಂಧಿಸುತ್ತದೆ ಮತ್ತು ಪೀರಿಯಡ್ ನ ವಿಳಂಬಕ್ಕೆ ಕಾರಣವಾಗಬಹುದು.
- ಇದಕ್ಕೆ ವಿರುದ್ಧವಾಗಿ, ಗಮನಾರ್ಹ ತೂಕ ಹೆಚ್ಚಳವು ಹಾರ್ಮೋನಲ್ ಇಂಬ್ಯಾಲೆನ್ಸ್ ಗೆ ಕಾರಣವಾಗಬಹುದು, ಇದು ಇರೆಗ್ಯುಲರ್ ಪೀರಿಯಡ್ಸ್ ಗೆ ಕಾರಣವಾಗಬಹುದು.
- ಆದ್ದರಿಂದ ಉತ್ತಮ ಹಾರ್ಮೋನಲ್ ಆರೋಗ್ಯ ಮತ್ತು ರೆಗ್ಯುಲರ್ ಪೀರಿಯಡ್ಸ್ ಗೆ ಸಮತೋಲಿತ ತೂಕವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ.
3. ಎಮರ್ಜನ್ಸಿ ಕಾಂಟ್ರಸೆಪ್ಷನ್
ಅಸುರಕ್ಷಿತ ಸೆಕ್ಸ್ ನಂತರ ಆಗುವ ಪ್ರೆಗ್ನೆನ್ಸಿಯನ್ನು ತಡೆಗಟ್ಟಲು ಬಳಸುವ ಮಾರ್ನಿಂಗ್-ಆಫ್ಟರ್ ಪಿಲ್ಸ್ ನಂತೆ ಎಮರ್ಜನ್ಸಿ ಕಾಂಟ್ರಸೆಪ್ಷನ್ ನಿಮ್ಮ ಮುಟ್ಟಿನ ಚಕ್ರದ ಮೇಲೆ ಪರಿಣಾಮ ಬೀರಬಹುದು.
- ಹೆಚ್ಚಿನ ಪ್ರಮಾಣದಲ್ಲಿ ಸಿಂಥಟಿಕ್ ಹಾರ್ಮೋನ್ಗಳು (ದೇಹದಲ್ಲಿನ ನೈಸರ್ಗಿಕ ಹಾರ್ಮೋನುಗಳ ಪರಿಣಾಮಗಳನ್ನು ಅನುಕರಿಸುವ ಮಾನವ ನಿರ್ಮಿತ ವಸ್ತುಗಳು) ನಿಮ್ಮ ಚಕ್ರದಲ್ಲಿ ಇರೆಗ್ಯುಲಾರಿಟಿಗಳನ್ನು ಉಂಟುಮಾಡುತ್ತವೆ ಮತ್ತು ಆರಂಭಿಕ, ತಡವಾದ ಅಥವಾ ಪೀರಿಯಡ್ ಸ್ಕಿಪ್ ಆಗಲು ಕಾರಣವಾಗುತ್ತವೆ.
- ಈ ಕಾಂಟ್ರಸೆಪ್ಟಿವ್ಸ್ ಉಂಟಾಗುವ ಈ ಹಾರ್ಮೋನಲ್ ಇಂಬ್ಯಾಲೆನ್ಸ್ ಕೇವಲ ತಾತ್ಕಾಲಿಕವಾಗಿರುತ್ತದೆ ಮತ್ತು ಸ್ವಲ್ಪ ಸಮಯದ ನಂತರ ನಿಮ್ಮ ಸೈಕಲ್ ನಾರ್ಮಲ್ ಆಗುತ್ತದೆ. ನೀವು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
4. ಹಾರ್ಮೋನಲ್ ಇಂಬ್ಯಾಲೆನ್ಸ್ಗಳು ಸಾಮಾನ್ಯ ಶಂಕಿತಗಳು
ಹಾರ್ಮೋನಲ್ ಇಂಬ್ಯಾಲೆನ್ಸ್ಗಳು ವಿಳಂಬದ ಪೀರಿಯಡ್ಸ್ ಗೆ ಕಾರಣವಾಗಬಹುದು.
- ಒಂದು ಮಹಿಳೆಯ ಸಂತಾನೋತ್ಪತ್ತಿಯ ವಯಸ್ಸಿನಲ್ಲಿ ಅವಳು ಮುಟ್ಟಾಗದಿರುವುದಕ್ಕೆ ಅಮನೋರಿಯಾ ಎಂಬ ವೈದ್ಯಕೀಯ ಪದವಿದೆ.
- ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS), ಥೈರಾಯ್ಡ್ ಅಸ್ವಸ್ಥತೆಗಳು ಮತ್ತು ಹೆಚ್ಚಿದ ಪ್ರೊಲ್ಯಾಕ್ಟಿನ್ ಮಟ್ಟಗಳು ಮುಂತಾದ ಸಾಮಾನ್ಯ ಕಾರಣಗಳು.
- PCOS ಹಾರ್ಮೋನಲ್ ಇಂಬ್ಯಾಲೆನ್ಸ್ ಮತ್ತು ಓವ್ಯುಲೇಶನ್ ಇರೆಗ್ಯುಲಾರಿಟಿಗಳಿಗೆ ಕಾರಣವಾಗುತ್ತದೆ.
- ಥೈರಾಯ್ಡ್ ಅಸ್ವಸ್ಥತೆಗಳು ಮೆಟಬಾಲಿಕ್ ರೇಟ್ ನ ಮೇಲೆ ನೇರ ಪರಿಣಾಮ ಬೀರುತ್ತವೆ ಮತ್ತು ಮುಟ್ಟಿನ ಚಕ್ರಗಳನ್ನು ಬದಲಾಯಿಸುತ್ತವೆ.
5. ಪೆರಿಮೆನೋಪಾಸ್: ಒಂದು ನೈಸರ್ಗಿಕ ಬದಲಾವಣೆ
ಮಹಿಳೆಯರು ಮಿಡ್ 30 ನಲ್ಲಿ ಸಂಭವಿಸಬಹುದಾದ ಪೆರಿಮೆನೋಪಾಸ್ಗೆ ಪ್ರವೇಶಿಸಿದಾಗ, ಹಾರ್ಮೋನ್ ಏರಿಳಿತಗಳು ಇನ್ಫ್ರೀಕ್ವೆಂಟ್ ಪೀರಿಯಡ್ಸ್ ಅಥವಾ ಪೀರಿಯಡ್ಸ್ ನಲ್ಲಿ ವಿಳಂಬಕ್ಕೆ ಕಾರಣವಾಗಬಹುದು.
- ಈ ಸ್ಟೇಜ್ ನಲ್ಲಿ, ಈಸ್ಟ್ರೋಜನ್ ಮಟ್ಟಗಳು ಬದಲಾಗುತ್ತವೆ, ಇದು ಓವ್ಯುಲೇಶನ್ ಮೇಲೆ ಪರಿಣಾಮ ಬೀರುತ್ತದೆ, ಮತ್ತು ಇದು ಇರೆಗ್ಯುಲರ್ ಪೀರಿಯಡ್ಸ್ ಗೆ ಕಾರಣವಾಗಬಹುದು.
- ಪೆರಿಮೆನೋಪಾಸ್ ಸಮಯದಲ್ಲಿ ಹಲವಾರು ವಾರಗಳು ಅಥವಾ ತಿಂಗಳುಗಳ ವರೆಗೆ ಪೀರಿಯಡ್ಸ್ ಸ್ಕಿಪ್ ಆಗುವುದು ಸಾಮಾನ್ಯವಾಗಿದೆ.
6. ಅನಾರೋಗ್ಯ ಮತ್ತು ಔಷಧಿಗಳು: ಆರೋಗ್ಯವು ಎಲ್ಲದಕ್ಕಿಂತಲೂ ಮುಖ್ಯವಾದಾಗ
ಜ್ವರ ಅಥವಾ ಇನ್ಫೆಕ್ಷನ್ ನಂತಹ ಅನಾರೋಗ್ಯವು ಓವ್ಯುಲೇಶನ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಮತ್ತು ನಿಮ್ಮ ಪೀರಿಯಡ್ ಅನ್ನು ತಡೆಯಬಹುದು.
- ಆಂಟಿ-ಡಿಪ್ರಶೆಂಟ್ಗಳು, ಆಂಟಿಸೈಕೋಟಿಕ್ಗಳು ಅಥವಾ ಕಿಮೊಥೆರಪಿ ಔಷಧಿಗಳಂತಹ ಔಷಧಿಗಳು ಹಾರ್ಮೋನುಗಳ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ ಆದ್ದರಿಂದ ನಿಮ್ಮ ಪೀರಿಯಡ್ ವಿಳಂಬವಾಗಬಹುದು.
- ನಿಮ್ಮ ವೈದ್ಯರನ್ನು ಭೇಟಿ ಮಾಡಿ ಆ ಔಷಧಿಯು ನಿಮ್ಮ ಮುಟ್ಟಿನ ಚಕ್ರವನ್ನು ವಿಳಂಬಗೊಳಿಸುವ ಬಗ್ಗೆ ನಿಮಗಿರುವ ಸಂದೇಹವನ್ನು ವಿವರಿಸಿ
7. ಅತಿಯಾದ-ವ್ಯಾಯಾಮ: ಮಿತಿಯನ್ನು ಮೀರುವುದು
ಅತಿಹೆಚ್ಚಿನ ದೈಹಿಕ ಚಟುವಟಿಕೆಯು ಹಾರ್ಮೋನಲ್ ಇಂಬ್ಯಾಲೆನ್ಸ್ ಗೆ ಕಾರಣವಾಗುತ್ತದೆ, ಮತ್ತು ಮಹಿಳೆಯರು ಇದರಿಂದಾಗಿ ಪೀರಿಯಡ್ಸ್ ಇರೆಗ್ಯುಲರ್ ಅಥವಾ ಮಿಸ್ ಆಗಬಹುದು.
- ಮುಟ್ಟಿನ ಚಕ್ರವನ್ನು ಹೈಪೊಥಲಾಮಸ್ ನಿಯಂತ್ರಿಸುತ್ತದೆ, ಆದರೆ ಮಹಿಳೆಯುಬ್ಬಳು ಅತಿಯಾದ ಸ್ಟ್ರೆಸ್ ಅನ್ನು ಅನುಭವಿಸಿದಾಗ, ಯಾರಾದರೂ ತೀವ್ರವಾದ ವ್ಯಾಯಾಮದಲ್ಲಿ ತೊಡಗಿದಾಗ, ವಿಶೇಷವಾಗಿ ಕ್ರೀಡಾಪಟುಗಳು ಅಥವಾ ದೈಹಿಕವಾಗಿ ಬೇಡಿಕೆಯಿರುವ ಜನರು.
- ಸಾಕಷ್ಟು ವಿಶ್ರಾಂತಿ, ವ್ಯಾಯಾಮದ ತೀವ್ರತೆಯನ್ನು ಕಡಿಮೆ ಮಾಡುವುದು ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಹಾರ್ಮೋನುಗಳನ್ನು ಬ್ಯಾಲೆನ್ಸ್ ಮಾಡಲು ಸಹಾಯವಾಗುತ್ತದೆ.
8. ಪ್ರಯಾಣ ಮತ್ತು ಲೈಫ್ಸ್ಟೈಲ್ ಬದಲಾವಣೆಗಳು: ಗೇರ್ಗಳನ್ನು ಬದಲಾಯಿಸುವುದರಿಂದ ಚಕ್ರಗಳು ಬದಲಾಗಬಹುದು
ಜೆಟ್ಲ್ಯಾಗ್, ಟೈಮ್ ಝೋನ್ಗಳನ್ನು ಷಿಫ್ಟ್ ಮಾಡುವುದು, ಅಥವಾ ದಿನಚರಿ ಅಥವಾ ನಿದ್ರೆಯ ಷೆಡ್ಯೂಲ್ ನಲ್ಲಿ ಬದಲಾವಣೆಗಳು ಉಂಟಾದಾಗ, ಇದು ದೇಹದ ಒಳಗಿನ ಕ್ಲಾಕ್ ನ ಕಾರ್ಯದ ಮೇಲೆ ಪರಿಣಾಮ ಬಿರುವುದರ ಮೂಲಕ ಪೀರಿಯಡ್ಸ್ ವಿಳಂಬವಾಗಬಹುದು. ಹೊಸ ನೌಕರಿಗೆ ಸೇರಿಕೊಳ್ಳುವುದು ಅಥವಾ ಯಾವುದೇ ದೊಡ್ಡ ನಿರ್ಧಾರ ಮುಂತಾದವು, ಹಾರ್ಮೋನಲ್ ರೆಗ್ಯುಲೇಶನ್ ಮೇಲೆ ಪ್ರಭಾವ ಬೀರುತ್ತದೆ ಮತ್ತು, ಅದರಿಂದಾಗಿ, ಪೀರಿಯಡ್ಸ್ ಸಹ ವಿಳಂಬವಾಗಬಹುದು.
9. ಬ್ರೆಸ್ಟ್ಫೀಡಿಂಗ್ : ಹಾರ್ಮೋನಲ್ ಸಪ್ರೆಶನ್
ಬ್ರೆಸ್ಟ್ ಫೀಡ್ ಮಾಡುವಾಗ, ಪ್ರೊಲಾಕ್ಟಿನ್ ಮಟ್ಟಗಳು ಹೆಚ್ಚಾಗುತ್ತವೆ, ಇದು ಓವ್ಯುಲೇಶನ್ ಅನ್ನು ನಿಗ್ರಹಿಸಬಹುದು ಮತ್ತು ನಿಮ್ಮ ಪೀರಿಯಡ್ ಅನ್ನು ವಿಳಂಬಗೊಳಿಸಬಹುದು.
- ಇದು ಪೋಸ್ಟ್ ಪಾರ್ಟಮ್ ಹಂತಕ್ಕೆ ನೈಸರ್ಗಿಕ ಪ್ರತಿಕ್ರಿಯೆಯಾಗಿದ್ದು, ಬ್ರೆಸ್ಟ್ ಫೀಡ್ ಮಾಡುವ ಆವರ್ತನ ಕಡಿಮೆಯಾದಾಗ ಇದು ಸಾಮಾನ್ಯವಾಗಿ ಸಾಮಾನ್ಯ ಸ್ಥಿತಿಗೆ ಬರುತ್ತದೆ.
- ಈ ಸಮಯದಲ್ಲಿ ಪೀರಿಯಡ್ ವಿಳಂಬವಾಗುವುದು ಸಾಮಾನ್ಯ ಮತ್ತು ಕಾಲಾನಂತರದಲ್ಲಿ ರೆಗ್ಯುಲರೈಜ್ ಆಗುತ್ತದೆ.
10. ದೀರ್ಘಕಾಲಿಕ ಪರಿಸ್ಥಿತಿ
ಡಯಾಬಿಟಿಸ್, ಸಿಲಿಯಾಕ್ ಡಿಸೀಸ್ ಅಥವಾ IBS ನಂತಹ ದೀರ್ಘಕಾಲಿಕ ಪರಿಸ್ಥಿತಿಗಳು, ಹಾರ್ಮೋನ್ಸ್ ನಲ್ಲಿ ಇಂಬ್ಯಾಲೆನ್ಸ್ ಗೆ ಕಾರಣವಾಗಬಹುದು ಮತ್ತು ಇದು ದೇಹದ ಮೇಲೆ ಒತ್ತಡಾವನ್ನು ಹೇರುತ್ತದೆ.
- ಆದಾಗ್ಯೂ, ಮುಟ್ಟಿನ ಚಕ್ರಗಳನ್ನು ಸ್ಥಿರಗೊಳಿಸಲು ಸರಿಯಾದ ಔಷಧಿಗಳು, ಡಯಟ್, ಮತ್ತು ಲೈಫ್ಸ್ಟೈಲ್ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಈ ಪರಿಸ್ಥಿತಿಗಳನ್ನು ನಿರ್ವಹಿಸಬಹುದು.
ಪೀರಿಯಡ್ಸ್ ವಿಳಂಬವಾದರೆ ತುಂಬಾನೇ ಭಯವಾಗಿರುತ್ತದೆ, ಮನಸ್ಸಿನಲ್ಲಿ ಎಮೋಶನ್ಸ್ ಮತ್ತು ಊಹೆಗಳ ಬಿರುಗಾಳಿಯನ್ನು ತರುತ್ತದೆ. ಆದರೆ ಆತುರದ ತೀರ್ಮಾನಗಳಿಗೆ ಹೋಗುವ ಬದಲು, ಕುತೂಹಲದಿಂದ ಮತ್ತು ನಿಮ್ಮ ದೇಹವು ನಿಮಗೆ ಏನನ್ನು ಹೇಳಲು ಪ್ರಯತ್ನಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮುಟ್ಟಿನ ಚಕ್ರಗಳು ನಿಮ್ಮ ಸಂಪೂರ್ಣ ಯೋಗಕ್ಷೇಮದೊಂದಿಗೆ ಪರಸ್ಪರ ಸಂಬಂಧ ಹೊಂದಿವೆ; ನಿಮ್ಮ ದೇಹವು ಗಮನ ಹರಿಸೆಂದು ನಿಮ್ಮನ್ನು ಕೇಳುತ್ತಿರಬಹುದು - ಅದು ವಿಶ್ರಾಂತಿ, ಆರೋಗ್ಯಕರ ದಿನಚರಿ ಅಥವಾ ಜೀವನದ ಬೇಡಿಕೆಗಳಿಂದ ಚೇತರಿಸಿಕೊಳ್ಳಲು ಕೂಡಾ ಆಗಿರಬಹುದು. ವಿಳಂಬದ ಬಗ್ಗೆ ಚಿಂತಿಸಬೇಡಿ ಆದರೆ ಈ ಅಂಶವನ್ನು ಪರಿಗಣಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ: ನಿಮ್ಮ ದೇಹ ಹೇಗಿದೆ?
ನಿಮ್ಮ ದೇಹಕ್ಕೆ ಸಾಕಷ್ಟು ಪೋಷಣೆ ಸಿಗುತ್ತಿದೆಯೇ? ನಿಮ್ಮ ಮುಟ್ಟಿನ ಆರೋಗ್ಯವು ನಿಮ್ಮ ಒಟ್ಟಾರೆ ಯೋಗಕ್ಷೇಮದ ಪ್ರಮುಖ ಭಾಗವಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಏನಾದರೂ ಸಮಸ್ಯೆ ಇದ್ದರೆ, ಬೆಂಬಲ ಪಡೆಯಲು ಹಿಂಜರಿಯಬೇಡಿ. ಈಗ ನಿಮ್ಮ ದೇಹವನ್ನು ನೋಡಿಕೊಂಡರೆ ಭವಿಷ್ಯದಲ್ಲಿ ಶಾಶ್ವತ ಸಮತೋಲನ ಮತ್ತು ಆರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.