ಟೀನ್ಸ್‌ನಲ್ಲಿ PCOS: ಒಂದು ಕಂಪ್ಲೀಟ್ ಗೈಡ್

777
2.3 k

ಪಾಲಿ ಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಎಂಬುದು ಭಾರತೀಯ ಟೀನೇಜ್ ಹುಡುಗಿಯರಲ್ಲಿ ಸರಿಸುಮಾರು 9% ರಷ್ಟು ಹುಡುಗಿಯರ ಮೇಲೆ ಪರಿಣಾಮ ಬೀರುವ ಒಂದು ಸ್ಥಿತಿಯಾಗಿದೆ. ಆದರೂ ಇದನ್ನು ಹೆಚ್ಚು ಜನ ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ ಅಥವಾ ಕಡೆಗಣಿಸುತ್ತಾರೆ.


PCOS ಒಂದು ಸಿಂಡ್ರೋಮ್ ಆಗಿದ್ದು, ಅಂದರೆ ಇದು ಪ್ರತಿ ವ್ಯಕ್ತಿಯಲ್ಲಿ ಬದಲಾಗಬಹುದಾದ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಟೀನೇಜರ್ಸ್ನಲ್ಲಿ PCOS ಯಾವಾಗಲೂ ಓವೇರಿಯನ್ ಸಿಸ್ಟ್ಗಳಿಗೆ ಸಂಬಂಧಿಸಿದ್ದು ಮಾತ್ರವಲ್ಲ; ಬದಲಾಗಿ ಸಾಮಾನ್ಯ ದೈಹಿಕ ಕಾರ್ಯಗಳನ್ನು ಅಡ್ಡಿಪಡಿಸುವ ಹಾರ್ಮೋನುಗಳ ಅಸಮತೋಲನವು ಉಂಟಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.


PCOS ನ ಆರಂಭಿಕ ಚಿಹ್ನೆಗಳು ಮತ್ತು ಅದನ್ನು ನಿರ್ವಹಿಸಲು ಪ್ರಾಯೋಗಿಕ (ಪ್ರಾಕ್ಟಿಕಲ್) ತಂತ್ರಗಳನ್ನು ಅರ್ಥಮಾಡಿಕೊಳ್ಳುವುದು ಯುವತಿಯರು ತಮ್ಮ ಆರೋಗ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಒಂದು ಟೀನೇಜರ್ಗೆ PCOS ಬರುವ ಸಾಧ್ಯತೆ ಇದೆಯೇ?

ಹೌದು, ಬರಬಹುದು! ಹಲವಾರು ಹೆಣ್ಣುಮಕ್ಕಳು ತಮ್ಮ ಟೀನೇಜ್ ನಲ್ಲೇ ಇದರ ಲಕ್ಷಣಗಳನ್ನು ಅನುಭವಿಸುತ್ತಾರೆ. ರಜಸ್ವಲ ಮತ್ತು ಹಾರ್ಮೋನು ಬದಲಾವಣೆಗಳು ಕೆಲವೊಂದು ಟೀನೇಜರ್ಸ್ನಲ್ಲಿ ಈ PCOS ಅನ್ನು ಟ್ರಿಗರ್ ಮಾಡಬಹುದು. ಈ ಕಾರಣದಿಂದ, ರೋಗನಿರ್ಣಯಕ್ಕೆ ಇದೊಂದು ಸಾಮಾನ್ಯ ಅವಧಿಯಾಗುತ್ತದೆ.


PCOS ಅನ್ನು ಆದಷ್ಟು ಬೇಗ ಕಂಡುಹಿಡಿಯುವ ಮೂಲಕ, ಡಯಾಬಿಟಿಸ್ ಮತ್ತು ಇನ್ಫರ್ಟಿಲಿಟಿ ನಂತಹ ದೀರ್ಘಕಾಲಿಕ ತೊಂದರೆಗಳನ್ನು ತಡೆಯುವಲ್ಲಿ ಸಹಾಯಕವಾಗುತ್ತದೆ.


ಟೀನೇಜರ್ಸ್ನಲ್ಲಿ ಕಂಡುಬರುವ PCOS ನ ಆರಂಭಿಕ ಚಿಹ್ನೆಗಳು ಯಾವುವು?

ಆರಂಭಿಕ ಲಕ್ಷಣಗಳನ್ನು ಕಂಡುಹಿಡಿಯುವುದು PCOS ಅನ್ನು ಯಶಸ್ವಿಯಾಗಿ ನಿರ್ವಹಿಸಲು ಬಹಳ ಮುಖ್ಯವಾಗಿದೆ. ಕೆಲವು ಸಾಮಾನ್ಯ ಚಿಹ್ನೆಗಳನ್ನು ಇಲ್ಲಿ ನೀಡಲಾಗಿದೆ:

1. ಇರೆಗ್ಯುಲರ್ ಪೀರಿಯಡ್ಸ್ 

PCOS ಇರುವ ಟೀನೇಜರ್ಸ್ಗೆ ಅವರ ಪೀರಿಯಡ್ಸ್ ಅಥವಾ ಸೈಕಲ್ಸ್ ಅನೇಕ ಬಾರಿ ಮಿಸ್ ಆಗುತ್ತಿರಬಹುದು. ಮುಟ್ಟಿದ ಮೊದಲ ವರ್ಷಗಳಲ್ಲಿ, ಒಂದು ಸೈಕಲ್ 21-45 ದಿನಗಳ ಅವಧಿಯಲ್ಲಿ ಬರುವುದು ಸಾಧಾರಣವಾಗಿದ್ದರೂ ಸಹ, ಈ ಇರೆಗ್ಯುಲಾರಿಟಿ ಸ್ಥಿರವಾಗಿ ಮುಂದುವರಿಯುವುದು — ಅಂದರೆ ಈ ರೇಂಜ್ ಅನ್ನು ದಾಟಿ ಬರುವ ಸೈಕಲ್ಸ್ — ಇದು ವೈದ್ಯಕೀಯ ಸಲಹೆ ಆವಶ್ಯಕವೆನಿಸುವ ಒಂದು ಸಮಸ್ಯೆಯನ್ನು ಸೂಚಿಸುತ್ತದೆ.

2. ಹೆಚ್ಚುವರಿ ಹೇರ್ ಗ್ರೋತ್

ಇದನ್ನು ಹಿರುಟಿಸಂ ಎನ್ನುತ್ತಾರೆ. ಈ ಲಕ್ಷಣದಲ್ಲಿ ಹೆಣ್ಣು ಮಕ್ಕಳಿಗೆ ಅಸಾಧಾರಣವಾದ ಜಾಗಗಳಲ್ಲಿ — ಅಂದರೆ ಮುಖ, ಎದೆ, ಅಥವಾ ಬೆನ್ನಿನಲ್ಲಿ — ಹೇರ್ ಗ್ರೋತ್ ಕಾಣಿಸಿಕೊಳ್ಳಬಹುದು. PCOS ಇರುವ ಯುವತಿಯರಲ್ಲಿ 70% ವರೆಗೆ ಈ ಹಿರುಟಿಸಂ ಅನ್ನು ಅನುಭವಿಸುತ್ತಿದ್ದಾರೆ ಎಂದು ರೀಸೆರ್ಚ್ ತಿಳಿಸುತ್ತಿದೆ.

3. ನಿರಂತರ ಆಕ್ನೆ

ಪ್ರೌಢಾವಸ್ಥೆಗೆ ಸಂಬಂಧಿಸಿದ ಮೊಡವೆಗಳಿಗಿಂತ ಭಿನ್ನವಾಗಿ, PCOS ಆಕ್ನೆ ಎಂಬುದು ನಿರಂತರವಾಗಿ ಇರುತ್ತದೆ ಮತ್ತು ಇದು ದವಡೆ, ಎದೆ ಅಥವಾ ಬೆನ್ನಿನಂತಹ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಬಹುದು.

4. ತೂಕ ಹೆಚ್ಚಾಗುವುದು

PCOS ತೂಕ ಹೆಚ್ಚಾಗಲು ಕಾರಣವಾಗುತ್ತದೆ, ವಿಶೇಷವಾಗಿ ಹೊಟ್ಟೆಯ ಸುತ್ತಲೂ ಆಗುತ್ತದೆ. ಇದು ಟೀನೇಜರ್ಸ್ ನಲ್ಲಿಯೂ ಸಹ PCOS ನ ಪ್ರಮುಖ ಅಂಶವಾದ ಇನ್ಸುಲಿನ್ ರೆಸಿಸ್ಟೆನ್ಸ್ಗೆ ಸಂಬಂಧಿಸಿದೆ.

5. ಮೂಡ್ ಸ್ವಿಂಗ್ಸ್

PCOS ದೇಹದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ – ಇದು ಮಾನಸಿಕ ಆರೋಗ್ಯ ಮೇಲೆಯೂ ಪರಿಣಾಮ ಬೀರಬಹುದು. PCOS ಇರುವ ಟೀನೇಜರ್ಗಳು ಆಕ್ನೆ, ತೂಕ ಹೆಚ್ಚಾಗುವುದು, ಅಥವಾ ಹೆಚ್ಚುವರಿ ಹೇರ್ ಗ್ರೋತ್ ನಿಂದಾಗಿ ಆಂಕ್ಸೈಟಿ, ಡಿಪ್ರೆಶನ್ ಅಥವಾ ಲೋ ಸೆಲ್ಫ್-ಎಸ್ಟೀಮ್ ಅನ್ನು ಅನುಭವಿಸುತ್ತಾರೆ.

6. ಕೂದಲು ಉದುರುವುದು

PCOS ಇರುವ ಇನ್ನೂ ಕೆಲವರಲ್ಲಿ ಕೂದಲು ಉದುರುವುದು ಅಥವಾ ಬೋಳು ತಲೆಯು ಸಹ ಸಂಭವಿಸಬಹುದು. ಇದು ಇನ್ನಷ್ಟು ಬಾಧಾಕರವಾಗಿರುತ್ತದೆ.


PCOS ಅನ್ನು ಆದಷ್ಟು ಬೇಗ ಕಂಡುಹಿಡಿಯುವುದು ಹೇಗೆ?

PCOS ಅನ್ನು ಆದಷ್ಟು ಬೇಗ ಕಂಡುಹಿಡಿಯುವುದು ಪ್ರಭಾವಶಾಲಿ ನಿರ್ವಹಣೆಗೆ ಬಹಳ ಮುಖ್ಯವಾಗಿರುತ್ತದೆ.


ಇದೋ ಈ ರೀತಿ ಮಾಡಿದರೆ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಬಹುದು:

  • ನಿಮ್ಮ ಪೀರಿಯಡ್ಸ್ ಅನ್ನು ಟ್ರ್ಯಾಕ್ ಮಾಡಿ: ಸೈಕಲ್ ಅವಧಿ ಅಥವಾ ಮಿಸ್ ಆದ ಪೀರಿಯಡ್ಸ್ ಮುಂತಾದ ಇರೆಗ್ಯುಲಾರಿಟಿಗಳನ್ನು ನೋಟ್ ಮಾಡಿಕೊಳ್ಳಿ.
  • ಲಕ್ಷಣಗಳನ್ನು ಗಮನಿಸಿ: ಹೆಚ್ಚುವರಿ ಹೇರ್ ಗ್ರೋತ್, ನಿರಂತರ ಆಕ್ನೆ, ಮತ್ತು ತೂಕದಲ್ಲಿ ಬದಲಾವಣೆಗಳು ಆಗಿವೆಯೇ ಎಂದು ಗಮನಿಸಿ.
  • ವೈದ್ಯರನ್ನು ಸಂಪರ್ಕಿಸಿ: ಹಾರ್ಮೋನ್ ಮಟ್ಟಗಳು ಮತ್ತು ಇನ್ಸುಲಿನ್ ರೆಸಿಸ್ಟೆನ್ಸ್ ಅನ್ನು ಚೆಕ್ ಮಾಡಲು ಬ್ಲಡ್ ಟೆಸ್ಟ್ ಮಾಡಿಸಿ. ಓವರಿಯ ಆರೋಗ್ಯದ ಕುರಿತು ತಿಳಿದುಕೊಳ್ಳಲು ಅಲ್ಟ್ರಾಸೌಂಡ್ ಮಾಡಿಸಬಹುದು.
  • ಲಕ್ಷಣಗಳ ಜರ್ನಲ್ ಒಂದನ್ನು ನಿರ್ವಹಿಸಿ: ನಿಮ್ಮ ದೇಹ ಮತ್ತು ಮೂಡ್ ನಲ್ಲಿರುವ ಬದಲಾವಣೆಗಳನ್ನು ರಿಕಾರ್ಡ್ ಮಾಡಿ.
  • ನಿಮ್ಮ ಕುಟುಂಬದ ಇತಿಹಾಸವನ್ನು ತಿಳಿಯಿರಿ: ಕೆಲವು ಕುಟುಂಬಗಳಲ್ಲಿ PCOS ಹಿಂದಿನಿಂದಲೇ ಇರುವ ಸಾಧ್ಯತೆ ಇದೆ, ಆದ್ದರಿಂದ ನಿಮ್ಮ ವೈದ್ಯರಿಗೆ ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಇತಿಹಾಸವನ್ನು ತಿಳಿಸಿ.

ಟೀನೇಜರ್ಸ್ಗೆ PCOS ಟ್ರೀಟ್ಮೆಂಟ್

PCOS ಅನ್ನು ನಿರ್ವಹಿಸುವುದು ಒಂದು ಟೀನೇಜರ್ಗೆ ತುಂಬಾ ಕಷ್ಟವೆನಿಸಬಹುದು. ಆದಾಗ್ಯೂ, ಲೈಫ್ಸ್ಟೈಲ್ ಬದಲಾವಣೆಗಳು, ಆಹಾರದಲ್ಲಿ ಹೊಂದಾಣಿಕೆಗಳು, ಮತ್ತು ವೈದ್ಯಕೀಯ ಬೆಂಬಲದೊಂದಿಗೆ ಇದು ಸಾಧ್ಯವಾಗುತ್ತದೆ. ಪ್ರಾರಂಭಿಸಲು ಕೆಲವು ಮಾರ್ಗಗಳು ಇಲ್ಲಿವೆ:

1. ಆರೋಗ್ಯಕರ ಆಹಾರಗಳನ್ನು ಸೇವಿಸಿ 

ಸಮತೋಲಿತ ಆಹಾರದ ಮೇಲೆ ಫೋಕಸ್ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು PCOS ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವುಗಳನ್ನು ಆರಿಸಿಕೊಳ್ಳಿ:

  • ಕಡಿಮೆ-ಗ್ಲೈಸೆಮಿಕ್ ಇಂಡೆಕ್ಸ್ (GI) ಆಹಾರಗಳು
    ಕ್ವಿನೋವಾ, ಬೇಳೆಗಳು, ಆಪಿಲ್ ಮತ್ತು ಸಿಹಿ ಗೆಣಸಿನಂತಹ ಆಹಾರಗಳು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಸಂಪೂರ್ಣ ಆಹಾರಗಳು
    ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್ಗಳು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುತ್ತವೆ.
  • ಆರೋಗ್ಯಕರ ಕೊಬ್ಬುಗಳು
    ಹಾರ್ಮೋನುಗಳು ಅಸಮತೋಲನವನ್ನು ತಡೆಹಿಡಿಯಲು ಆವಕಾಡೊಗಳು, ಬೀಜಗಳು ಮತ್ತು ಆಲಿವ್ ಎಣ್ಣೆಯಂತಹ ಮೂಲಗಳನ್ನು ಸೇರಿಸಿ.

2. ಆಕ್ಟಿವ್ ಆಗಿರಿ 

ನಿಯಮಿತ ದೈಹಿಕ ಚಟುವಟಿಕೆ ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಸುಧಾರಿಸುತ್ತದೆ ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಟೀನೇಜರ್ಸ್ ಈ ರೀತಿಯ ಚಟುವಟಿಕೆಗಳನ್ನು ಪ್ರಯತ್ನಿಸಬಹುದು:

  • ಡಾನ್ಸ್
  • ಯೋಗ
  • ಸೈಕ್ಲಿಂಗ್
  • ಸ್ವಿಮ್ಮಿಂಗ್
  • ವಾಕಿಂಗ್

3. ಔಷಧಿಗಳು ಮತ್ತು ಸಪ್ಲಿಮೆಂಟ್ಗಳನ್ನು ಬಳಸಬಹುದು

ಹಾರ್ಮೋನಲ್ ಬರ್ತ್ ಕಂಟ್ರೋಲ್ ಔಷಧಿಗಳು ಪೀರಿಯಡ್ಸ್ ಅನ್ನು ರೆಗ್ಯುಲೇಟ್ ಮಾಡಲು ಸಹಾಯ ಮಾಡುತ್ತವೆ, ಆದರೆ ಇದು “ಎಲ್ಲರಿಗೂ ಸರಿಹೊಂದುವ” ಪರಿಷ್ಕಾರವಲ್ಲ. ನಿಮ್ಮ ವೈಯಕ್ತಿಕ ಪರಿಸ್ಥಿತಿಗೆ ತಕ್ಕಂತೆ ವೈದ್ಯರ ಸಲಹೆಯನ್ನು ಪಡೆಯುವುದು ಅತ್ಯಾವಶ್ಯಕ.

ಆದಾಗ್ಯೂ, ಕೆಲವು ಸಪ್ಲಿಮೆಂಟ್ಗಳು PCOS ಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡಬಹುದು, ಅವು ಹೀಗಿವೆ:

  • ಇನೋಸ್ಟಿಲ್: ಇದು ಇನ್ಸುಲಿನ್ ರೆಗ್ಯುಲೇಶನ್ ಅನ್ನು ಸಪೋರ್ಟ್ ಮಾಡುತ್ತದೆ.
  • ವಿಟಮಿನ್ D: ಹಾರ್ಮೋನಲ್ ಬ್ಯಾಲೆನ್ಸ್ ಅನ್ನು ಸುಧಾರಿಸುತ್ತದೆ.
  • ಒಮೇಗಾ-3 ಗಳು : ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಆಂಡ್ರೋಜನ್ಸ್ ಅನ್ನು ಕಡಿಮೆ ಮಾಡಬಹುದು.

ಸಪ್ಲಿಮೆಂಟ್ಸ್ ಅನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವಿಸಬೇಕು ಎಂಬುದರಲ್ಲಿ ಗಮನವಿಡಿ.

4. ನಿಮ್ಮ ಮಾನಸಿಕ ಆರೋಗ್ಯದ ಕುರಿತು ಕಾಳಜಿ ವಹಿಸಿ 

PCOS ನಿಮ್ಮ ಮಾನಸಿಕ ಆರೋಗ್ಯವನ್ನು ಹದಗೆಡಿಸಬಹುದು. ಗೆಳೆಯರು, ಕುಟುಂಬದವರು ಅಥವಾ ಒಂದು ಥೆರಪಿಸ್ಟ್ನ ಜೊತೆ ಮಾತಾಡಿದರೆ ನಿಮಗೆ ಬೇಕಾಗುವಷ್ಟು ಬೆಂಬಲ ಸಿಗುತ್ತದೆ. ಯೋಗಾ ಮತ್ತು ಮೈಂಡ್ಫುಲ್ನೆಸ್ ಮುಂತಾದ ಚಟುವಟಿಕೆಗಳು ಸ್ಟ್ರೆಸ್ ಅನ್ನು ಕಡಿಮೆ ಮಾಡಬಹುದು.

5. ರೆಗ್ಯುಲರ್ ಚೆಕಪ್ ಮಾಡಿಸಿಕೊಳ್ಳಿ

PCOS ನ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಟ್ರೀಟ್ಮೆಂಟ್ ಪ್ಲಾನ್ಸ್ ಅನ್ನು ರೂಪಿಸಲು ರೋಗ ಲಕ್ಷಣಗಳನ್ನು ಪತ್ತೆಹಚ್ಚುವುದು, ಹಾರ್ಮೋನ್ ಪ್ಯಾನೆಲ್ಸ್ ಮತ್ತು ಅಲ್ಟ್ರಾಸೌಂಡ್ಗಳು ಸೇರಿ ನಿಯಮಿತ ವೈದ್ಯಕೀಯ ಮೌಲ್ಯಮಾಪನಗಳು ಅತ್ಯಗತ್ಯ.


ಟೀನೇಜರ್ಸ್ ಗಾಗಿ PCOS ಡಯಟ್

PCOS ಲಕ್ಷಣಗಳನ್ನು ನಿರ್ವಹಿಸುವಲ್ಲಿ ಆಹಾರವು ನಿರ್ಣಾಯಕ ಪಾತ್ರವಹಿಸುತ್ತದೆ. ಕೆಲವು ಆಹಾರ ಮಾರ್ಗಸೂಚಿಗಳು ಇಲ್ಲಿವೆ:

  • ಸಂಪೂರ್ಣ ಆಹಾರಗಳು: ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್ಗಳನ್ನು ಸೇರಿಸಿ
  • ಕಡಿಮೆ - ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರಗಳು: ಕಡಲೆ, ಬೇಳೆಗಳು ಮತ್ತು ಬ್ರೌನ್ ರೈಸ್ ನಂತಹ ಆಹಾರಗಳು ಸ್ಥಿರವಾದ ಇನ್ಸುಲಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ಆರೋಗ್ಯಕರ ಕೊಬ್ಬುಗಳು: ಆವಕಾಡೊಗಳು, ಬೀಜಗಳು ಮತ್ತು ಆಲಿವ್ ಎಣ್ಣೆ ಹಾರ್ಮೋನ್ ಸಮತೋಲನಕ್ಕೆ ಅತ್ಯುತ್ತಮವಾಗಿವೆ.
  • ಸಕ್ಕರೆ ಆಹಾರಗಳು ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳನ್ನು ಮಿತಿಗೊಳಿಸಿ: ಇವು ಇನ್ಸುಲಿನ್ ರೆಸಿಸ್ಟೆನ್ಸ್ ಅನ್ನು ಇನ್ನಷ್ಟು ಹದಗೆಡಿಸಬಹುದು.

PCOS ಗೆ ವ್ಯಾಯಾಮದ ಪ್ರಯೋಜನಗಳು

ವ್ಯಾಯಾಮವು ಕೇವಲ ತೂಕ ಇಳಿಸುವ ಬಗ್ಗೆ ಅಲ್ಲ – ಇದು PCOS ಗೆ ಹಲವಾರು ಪ್ರಯೋಜನಗಳನ್ನು ಹೊಂದಿದೆ:

  • ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಸುಧಾರಿಸುತ್ತದೆ: ನಿಯಮಿತ ಚಟುವಟಿಕೆಯು ದೇಹವು ಇನ್ಸುಲಿನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತದೆ.
  • ಆಂಡ್ರೋಜೆನ್ ಮಟ್ಟವನ್ನು ಕಡಿಮೆ ಮಾಡುತ್ತದೆ: ವ್ಯಾಯಾಮವು ಪುರುಷ ಹಾರ್ಮೋನುಗಳನ್ನು ಕಡಿಮೆ ಮಾಡಲು ಮತ್ತು ಮೊಡವೆ ಮತ್ತು ಹೆಚ್ಚುವರಿ ಕೂದಲು ಬೆಳವಣಿಗೆಯಂತಹ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಮೂಡ್ ಅನ್ನು ಉತ್ತೇಜಿಸುತ್ತದೆ: ದೈಹಿಕ ಚಟುವಟಿಕೆ ಎಂಡಾರ್ಫಿನ್ಗಳನ್ನು ಬಿಡುಗಡೆ ಮಾಡುತ್ತದೆ, ಆಂಕ್ಸೈಟಿ ಮತ್ತು ಡಿಪ್ರೆಶನ್ ಅನ್ನು ಎದುರಿಸುತ್ತದೆ.

PCOS ಇರುವ ಟೀನೇಜರ್ಸ್ ಗೆ ಮಾನಸಿಕ ಆರೋಗ್ಯದ ಪರಿಗಣನೆಗಳು

PCOS ಭಾವನಾತ್ಮಕ ಸವಾಲುಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಟೀನೇಜರ್ಸ್ ಗೆ ಮೊಡವೆ, ತೂಕ ಹೆಚ್ಚಾಗುವುದು ಅಥವಾ ಹೆಚ್ಚುವರಿ ಕೂದಲಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸ್ವಾಭಿಮಾನ ಕಡಿಮೆಯಾಗುವುದು ಮತ್ತು ಆಂಕ್ಸೈಟಿ ಮತ್ತು ಡಿಪ್ರೆಶನ್ ನಂತಹ ಮೂಡ್ ಡಿಸಾರ್ಡರ್ಗಳು ಸಾಮಾನ್ಯವಾಗಿದೆ. ಇದು ಮುಖ್ಯ:

  • ಕುಟುಂಬ, ಗೆಳೆಯರು ಅಥವಾ ಬೆಂಬಲ ಗುಂಪುಗಳಿಂದ ಬೆಂಬಲವನ್ನು ಪಡೆಯಿರಿ.
  • ನೀವು ಅತಿಯಾದ ಒತ್ತಡವನ್ನು ಅನುಭವಿಸಿದರೆ ಥೆರಪಿಸ್ಟ್ನೊಂದಿಗೆ ಮಾತನಾಡಿ.
  • ಜರ್ನಲಿಂಗ್ ಅಥವಾ ಅಧ್ಯಾನದಂತಹ ಸೆಲ್ಫ್-ಕೇರ್ ಮತ್ತು ಸ್ಟ್ರೆಸ್-ರಿಲೀಫ್ ಟೆಕ್ನಿಕ್ಗಳನ್ನು ಅಭ್ಯಾಸ ಮಾಡಿ.

ಆದಷ್ಟು ಬೇಗ ಕಂಡುಹಿಡಿಯುವುದು ಮತ್ತು ಪೂರ್ವಭಾವಿ ನಿರ್ವಹಣೆ

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಟೀನೇಜ್ ನಲ್ಲೇ ಆರಂಭವಾಗಬಹುದು, ಆದ್ದರಿಂದ ಆದಷ್ಟು ಬೇಗ ಇದರ ಚಿಹ್ನೆಗಳನ್ನು ಕಂಡುಹಿಡಿಯುವುದು ಅತ್ಯಾವಶ್ಯಕವಾಗಿದೆ. ಇಲ್ಲೊಂದು ಚೆಕ್ಲಿಸ್ಟ್ ಇದೆ ನೋಡಿ:

  • ಲಕ್ಷಣಗಳನ್ನು ಚರ್ಚಿಸಲು ವೈದ್ಯರನ್ನು ರೆಗ್ಯುಲರ್ ಆಗಿ ಭೇಟಿ ಮಾಡಿ.
  • ನಿಮ್ಮ ಪೀರಿಯಡ್ ಸೈಕಲ್ ನಲ್ಲಿ ಮತ್ತು ಇತರೆ ಬದಲಾವಣೆಗಳನ್ನು ಟ್ರ್ಯಾಕ್ ಮಾಡಿ.
  • ಕಡಿಮೆ-GI ಇರುವ ಆಹಾರಗಳನ್ನು ಒಳಗೊಂಡ ಸಮತೋಲಿತ ಆಹಾರದಲ್ಲಿ ಫೋಕಸ್ ಮಾಡಿ.
  • ನಿಯಮಿತ ದೈಹಿಕ ಚಟುವಟಿಕೆ ಇರುವಂತೆ ನೋಡಿಕೊಳ್ಳಿ.
  • ಮಾನಸಿಕ ಆರೋಗ್ಯದ ಸವಾಲುಗಳನ್ನು ಥೆರಪಿ ಅಥವಾ ಬೆಂಬಲ ಗುಂಪುಗಳ ಸಹಾಯದಿಂದ ಬಗೆಹರಿಸಿ.

PCOS ಎಂಬುದು ಒಂದು ಜೀವನಾವಧಿ ಸ್ಥಿತಿ, ಆದರೆ ಆದಷ್ಟು ಬೇಗ ಕಂಡುಹಿಡಿಯುವುದು ಮತ್ತು ಪೂರ್ವಭಾವಿ ನಿರ್ವಹಣೆಯ ಮೂಲಕ, ಜೀವನದ ಗುಣಮಟ್ಟವನ್ನು ಬಹುಮಟ್ಟಿಗೆ ಸುಧಾರಿಸಬಹುದು. ಗಮನವಿಡಿ, ಈ ಪ್ರಯಾಣದಲ್ಲಿ ನೀವು ಒಬ್ಬಂಟಿಗರಲ್ಲ, ಹಾಗೆಯೇ ಸರಿಯಾದ ಸಾಧನಗಳು ಮತ್ತು ಬೆಂಬಲ ಒಟ್ಟಿಗೆ, ನೀವು ನಿಮ್ಮ ಆರೋಗ್ಯವನ್ನು ಹತೌಟಿಯಲ್ಲಿ ಇಟ್ಟುಕೊಂಡು ಸಂತೋಷದಿಂದ ಬದುಕಬಹುದು.