ನಿಮ್ಮ ಮುಟ್ಟಿನ  ರಕ್ತವು ಯಾವಾಗಲೂ ಒಂದೇ ಬಣ್ಣದಲ್ಲಿರುವುದಿಲ್ಲ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಕೆಲವೊಮ್ಮೆ ಇದು ಪ್ರಕಾಶಮಾನವಾದಕೆಂಪು ಬಣ್ಣದಲ್ಲಿ ಕಾಣಿಸುತ್ತದೆ, ಇನ್ನೂ ಕೆಲವು ಬಾರಿ ಇದು ಕಂದು ಅಥವಾ ಕಪ್ಪು ಬಣ್ಣದಲ್ಲೂ ಕಾಣಿಸಬಹುದು. ಬಣ್ಣದಲ್ಲಿ ಕಂಡುಬರುವ ಈ ವ್ಯತ್ಯಾಸವು ವಿಚಿತ್ರವಾಗಿ ಕಾಣಿಸಬಹುದು, ಆದರೆ ಇದು ಸರ್ವೇ ಸಾಮಾನ್ಯವಾಗಿದೆ. ನಿಮ್ಮ ಮುಟ್ಟಿನ ರಕ್ತವು ಕಂದು ಬಣ್ಣದಲ್ಲಿರುವುದಕ್ಕೆ ಕಾರಣಗಳೇನು ಮತ್ತು ಇದು ನಿಮ್ಮ ಮಾಸಿಕ ಆರೋಗ್ಯದ ಬಗ್ಗೆ ಏನನ್ನು ತಿಳಿಸುತ್ತದೆ ಎಂಬುದರ ಕುರಿತು ನೋಡೋಣ.

ನಿಮ್ಮ ಮುಟ್ಟಿನ  ರಕ್ತ ಏಕೆ ಕಂದು ಬಣ್ಣದಲ್ಲಿ ಕಾಣಿಸುತ್ತದೆ?

ಕೆಲವೊಮ್ಮೆ, ಮುಟ್ಟಿನ  ರಕ್ತವು ಕೆಂಪು ಬಣ್ಣದ ಬದಲಿಗೆ ಕಂದು ಬಣ್ಣದಲ್ಲಿ ಕಾಣುತ್ತದೆ.  ಬಹಳಕಾಲದ ವರೆಗೆ ರಕ್ತವು ಗರ್ಭಾಶಯದಲ್ಲಿ ಉಳಿದುಕೊಂಡಿದ್ದು ಆಕ್ಸಿಜನ್ ಜೊತೆ ಪ್ರತಿಕ್ರಿಯಿಸುವದರಿಂದ ಇದು ಸಂಭವಿಸುತ್ತದೆ, ಇದರ ಪರಿಣಾಮವಾಗಿ ಕಂದು ಬಣ್ಣ ಬರುತ್ತದೆ. ವಿಶೇಷವಾಗಿ ನಿಮ್ಮ ಮುಟ್ಟಿನ  ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ, ಹರಿವಿನ ಪ್ರಮಾಣ ಕಡಿಮೆ ಆಗಿರುತ್ತದೆ, ಆ ಸಮಯಗಳಲ್ಲಿ ಇದು ಬಹಳ ಸಾಮಾನ್ಯವಾಗಿದೆ. ಆದರೆ ಇದು ಹೆಚ್ಚಾದರೆ ಅಥವಾ ಹೆಚ್ಚಿನ  ನೋವು ಅಥವಾ ಕೆಟ್ಟ ವಾಸನೆಗಳಂತಹ ಇತರ ಸಮಸ್ಯೆಗಳಿದ್ದಲ್ಲಿ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಮುಟ್ಟಿನ  ರಕ್ತದ ಬಣ್ಣ ಹೇಳುವುದಾದರು ಏನು?

ನಿಮ್ಮ ಮುಟ್ಟಿನ  ರಕ್ತದ ಬಣ್ಣವು ರಕ್ತದ ಹರಿವು, ಅದು ನಿಮ್ಮ ಗರ್ಭಾಶಯದಲ್ಲಿ ಎಷ್ಟು ಸಮಯದವರೆಗೆ ಇದ್ದಿತ್ತು ಮತ್ತು ಆಮ್ಲಜನಕದೊಡನೆ ಇರುವ ಸಂಪರ್ಕ ಸೇರಿದಂತೆ ಹಲವಾರು ಅಂಶಗಳ ಆಧಾರದ ಮೇಲೆ ಬದಲಾಗಬಹುದು. ಮುಟ್ಟಿನ   ರಕ್ತವು ಪ್ರಕಾಶಮಾನವಾದಕೆಂಪು ಬಣ್ಣದಿಂದ ಗಾಢ ಕಂದು ಬಣ್ಣಕ್ಕೆ ಬದಲಾಗುವುದು ಸಾಮಾನ್ಯವಾದರೂ, ಬಣ್ಣದ ವ್ಯತ್ಯಾಸಗಳು ಕೆಲವೊಮ್ಮೆ ಗೊಂದಲಕ್ಕೊಳಗಾಗಬಹುದು. ಆದಾಗ್ಯೂ, ಈ ಬಣ್ಣಗಳು ಏಕೆ ಕಾಣಿಸುತ್ತವೆ ಎಂದು ಅರ್ಥಮಾಡಿಕೊಳ್ಳುವುದು ನಿಮ್ಮ ಮುಟ್ಟಿನ  ಆರೋಗ್ಯದ ಬಗ್ಗೆ ಅಮೂಲ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ.

  • ಪ್ರಕಾಶಮಾನವಾದಕೆಂಪು

ಮುಟ್ಟಿನ  ತಾಜಾ ರಕ್ತವು ಸಾಮಾನ್ಯವಾಗಿ ಪ್ರಕಾಶಮಾನವಾದಕೆಂಪು ಬಣ್ಣದ್ದಾಗಿರುತ್ತದೆ. ಗರ್ಭಾಶಯದಿಂದ ರಕ್ತವು ವೇಗವಾಗಿ ಹರಿಯುತ್ತಿದೆ ಮತ್ತು ಆಕ್ಸಿಡೈಜ್ ಆಗಲು ಹೆಚ್ಚು ಸಮಯವಿರಲಿಲ್ಲ ಎಂದು ಇದು ಸೂಚಿಸುತ್ತದೆ. ಪ್ರಕಾಶಮಾನವಾದಕೆಂಪು ರಕ್ತವನ್ನು ಸಾಮಾನ್ಯ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ನಿಮ್ಮ ಮುಟ್ಟಿನ  ಆರಂಭಿಕ ದಿನಗಳಲ್ಲಿ ಹರಿವು ಸಾಮಾನ್ಯವಾಗಿ ಹೆಚ್ಚು ಇರುತ್ತದೆ.

  • ಕಂದು ಅಥವಾ ಗಾಢ ಕೆಂಪು

ಮುಟ್ಟಿನ  ರಕ್ತವು ಗರ್ಭಾಶಯದಲ್ಲಿ ದೀರ್ಘಕಾಲ ಉಳಿಯುವುದರಿಂದ, ಅದು ಕಂದು ಅಥವಾ ಗಾಢ ಕೆಂಪು ಬಣ್ಣದಲ್ಲಿ ಕಾಣಿಸಬಹುದು. ರಕ್ತವು ಹೆಚ್ಚು ಕಾಲವಿದ್ದಾಗ ಮತ್ತು ಆಕ್ಸಿಡೈಜ್ ಆಗುತ್ತಿದ್ದಂತೆ ಈ ಬಣ್ಣದ ಬದಲಾವಣೆಯು ಸಂಭವಿಸುತ್ತದೆ. ನಿಮ್ಮ ಮುಟ್ಟಿನ  ಆರಂಭದಲ್ಲಿ ಅಥವಾ ಕೊನೆಯಲ್ಲಿ ರಕ್ತದ ಹರಿವು ಕಡಿಮೆಯಾದಾಗ ಕಂದು ಅಥವಾ ಗಾಢ ಕೆಂಪು ರಕ್ತವನ್ನು ಕಾಣುವುದು ಸಾಮಾನ್ಯವಾಗಿದೆ. ಇದು ಪ್ರಕಾಶಮಾನವಾದಕೆಂಪು ರಕ್ತಕ್ಕಿಂತ ಭಿನ್ನವಾಗಿ ಕಂಡಾರೂ ಸಹ, ಕಂದು ಅಥವಾ ಗಾಢ ಕೆಂಪು ರಕ್ತದ ಕುರಿತು ಅಷ್ಟೆನೂ ಚಿಂತಿಸಬೇಕಾಗಿಲ್ಲ.

  • ಕಪ್ಪು

ಕೆಲವೊಮ್ಮೆ, ಮುಟ್ಟಿನ  ರಕ್ತವು ಕಪ್ಪು ಬಣ್ಣದಲ್ಲಿ ಕಾಣಿಸಬಹುದು, ಇದು ನಿಮ್ಮ ಮುಟ್ಟಿನ  ಕೊನೆಯಲ್ಲಿ ಹರಿವು ಕಡಿಮೆಯಾದಾಗ ಕಾಣಿಸುತ್ತದೆ. ರಕ್ತವು ಗರ್ಭಾಶಯದಲ್ಲಿ ದೀರ್ಘಕಾಲದವರೆಗೆ ಇದ್ದಾಗ ಈ ಗಾಢ ಬಣ್ಣವು ಸಂಭವಿಸುತ್ತದೆ, ಇದು ಮತ್ತಷ್ಟು ಆಕ್ಸಿಡೀಕರಣಕ್ಕೆ ಕಾರಣವಾಗುತ್ತದೆ. ಕಪ್ಪು ರಕ್ತವು ಅಪಾಯಕಾರಿ ಎಂದು ತೋರಿದರೂ, ಇದು ಅಷ್ಟೇನೂ ಚಿಂತಿಸಬೇಕಾದ ವಿಷಯವಲ್ಲ, ಅಷ್ಟೇ ಅಲ್ಲದೆ ಇದೊಂದು ಸಾಮಾನ್ಯ ವ್ಯತ್ಯಾಸವೆಂದು ಪರಿಗಣಿಸಲಾಗುತ್ತದೆ.

  • ಗುಲಾಬಿ ಅಥವಾ ತಿಳಿ ಕೆಂಪು

ಕೆಲವೊಮ್ಮೆ, ಅದರಲ್ಲೂ ಕಡಿಮೆ ಹರಿವಿನ ದಿನಗಳಲ್ಲಿ, ಗುಲಾಬಿ ಅಥವಾ ತಿಳಿ ಕೆಂಪು ಬಣ್ಣದಲ್ಲಿ ಕಂಡುಬರುವ ಮುಟ್ಟಿನ  ರಕ್ತವನ್ನು ನೀವು ಗಮನಿಸಬಹುದು. ಈ ಬಣ್ಣದ ಬದಲಾವಣೆಯು ಹೊಸ ರಕ್ತ ಮತ್ತು ಸರ್ವಿಕಲ್ ಮ್ಯೂಕಸ್‌ನ ಮಿಶ್ರಣದಿಂದ ಉಂಟಾಗಬಹುದು. ಸಾಮಾನ್ಯವಾಗಿ ಇದರ ಬಗ್ಗೆ ಅಷ್ಟೇನೂ ಚಿಂತೆ ಬೇಕಾಗಿಲ್ಲ, ಜೊತೆಗೆ ಇದು ನಿಮ್ಮ ಮುಟ್ಟಿನ  ಕೊನೆಯ ಹಂತವನ್ನು ಸೂಚಿಸಬಹುದು.

  • ಬೂದು ಅಥವಾ ಹಸಿರು

ಅಪರೂಪದ ಸಂದರ್ಭಗಳಲ್ಲಿ, ಮುಟ್ಟಿನ  ರಕ್ತವು ಬೂದು ಅಥವಾ ಹಸಿರು ಬಣ್ಣದಲ್ಲಿ ಕಂಡುಬರಬಹುದು. ಇದು ಸೋಂಕಿನ ಅಥವಾ ಬಹಳ ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಬಹುದು, ಲೈಂಗಿಕವಾಗಿ ಪ್ರಸಾರವಾಗುವ ಸೋಂಕು ಅಥವಾ ಪೆಲ್ವಿಕ್ ಇನ್‌ಪ್ಲಮೇಟರಿ ಕಾಯಿಲೆಯಂತಹ ಬಹಳ ಗಂಭೀರವಾದ ಆರೋಗ್ಯ ಸ್ಥಿತಿಯಾಗಿರಬಹುದು. ಬೂದು ಅಥವಾ ಹಸಿರು ಬಣ್ಣಗಳಂತಹ ಅಸಾಮಾನ್ಯ ಬಣ್ಣಗಳನ್ನು ನೀವು ಗಮನಿಸಿದರೆ, ತಪಾಸಣೆ ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ನಿಮ್ಮ ಮುಟ್ಟಿನ  ರಕ್ತದಲ್ಲಿನ ಬಣ್ಣದ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಮುಟ್ಟಿನ  ಆರೋಗ್ಯದ ಕಡೆಗೆ ಗಮನ ಹರಿಸಲು ಮತ್ತು ಯಾವುದೇ ಸಂಭವನೀಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡಬಹುದು. ನಿಮ್ಮ ಮುಟ್ಟಿನ  ರಕ್ತದ ಬಣ್ಣ ಅಥವಾ ಸ್ಥಿರತೆಯ ಬಗ್ಗೆ ನಿಮಗೆ ಚಿಂತೆಗಳಿದ್ದರೆ, ವೈದ್ಯರ ಮಾರ್ಗದರ್ಶನವನ್ನು ಪಡೆಯಲು ಹಿಂಜರಿಯಬೇಡಿ.

ಕಂದು ರಕ್ತದ ಮುಟ್ಟಿನ ಕಾರಣಗಳು

ನಿಮ್ಮ ಮುಟ್ಟಿನ  ಸಮಯದಲ್ಲಿ ಕಂದು ಬಣ್ಣದ ರಕ್ತವು ಕಾಣಿಸಿಕೊಂಡಾಗ ನೀವು ವ್ಯಾಕುಲಗೊಳ್ಳಬಹುದು. ಆದರೆ ಇದು ತುಂಬಾ ಸಾಮಾನ್ಯವಾಗಿದೆ ಮತ್ತು ಇದು ವಿವಿಧ ಕಾರಣಗಳಿಗಾಗಿ ಸಂಭವಿಸುತ್ತದೆ. ಇದು ಏಕೆ ಸಂಭವಿಸುತ್ತೆ ಎಂಬುದನ್ನು ತಿಳಿದುಕೊಳ್ಳುವುದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಬಹುದು. ಕಂದು ಬಣ್ಣದಲ್ಲಿರುವ ಮುಟ್ಟಿನ  ರಕ್ತದ ಕೆಲವು ಸರಳ ಕಾರಣಗಳು ಇಲ್ಲಿವೆ:

  • ರಕ್ತದ ಆಕ್ಸಿಡೇಶನ್

ರಕ್ತವು ಗಾಳಿಯೊಂದಿಗೆ ಸಂಪರ್ಕವಾದಾಗ, ಇಲ್ಲಿ ಆಕ್ಸಿಡೇಶನ್ ಎಂದು ಕರೆಯಲ್ಪಡುವ ಪ್ರಕ್ರಿಯೆ ನಡೆಯುತ್ತದೆ, ಇದು ಈ ಕಂದು ಬಣ್ಣಕ್ಕೆ ಕಾರಣವಾಗುತ್ತದೆ. ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ರಕ್ತವು ದೇಹದಿಂದ ನಿಧಾನಗತಿಯಲ್ಲಿ ಹೊರಬಂದಾಗ ಇದು ಸಂಭವಿಸುತ್ತದೆ, ಇದು ಆಕ್ಸಿಡೀಕರಣ ಸಂಭವಿಸಲು ಹೆಚ್ಚಿನ ಸಮಯವನ್ನು ಒದಗಿಸುತ್ತದೆ.

  • ನಿಧಾನಗತಿಯ ಹರಿವು

ಮುಟ್ಟಿನ  ರಕ್ತವು ಗರ್ಭಾಶಯದಿಂದ ಹೊರಬರಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು, ಇದರ ಪರಿಣಾಮವಾಗಿ ಗಾಢವಾದ ಛಾಯೆಗಳು ಉಂಟಾಗುತ್ತವೆ. ಹರಿವು ಕಡಿಮೆಯಿದ್ದಾಗ ಅಥವಾ ರಕ್ತ ಹೆಪ್ಪುಕಟ್ಟಿದಾಗ ಇದು ಸಂಭವಿಸಬಹುದು, ಇದು ರಕ್ತದ ಹೊರಹರಿವನ್ನು ತಡೆಯುವುದರ ಜೊತೆಗೆ ಗಾಢವಾದ ಛಾಯೆಗಳಿಗೆ ಕಾರಣವಾಗಬಹುದು.

  • ಹಾರ್ಮೋನುಗಳ ಬದಲಾವಣೆಗಳು

ಹಾರ್ಮೋನ್ ಮಟ್ಟಗಳಲ್ಲಿನ ಬದಲಾವಣೆಗಳು, ವಿಶೇಷವಾಗಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್, ನಿಮ್ಮ ಮುಟ್ಟಿನ  ರಕ್ತದ ಬಣ್ಣದ ಮೇಲೆ ಪರಿಣಾಮ ಬೀರಬಹುದು. ಈ ಹಾರ್ಮೋನುಗಳ ಬದಲಾವಣೆಗಳು ಕೆಲವೊಮ್ಮೆ ಮುಟ್ಟಿನ  ಸಮಯದಲ್ಲಿ ಕಂದು ಬಣ್ಣದ ರಕ್ತಕ್ಕೆ ಕಾರಣವಾಗಬಹುದು.

ನಿಮ್ಮ ಮುಟ್ಟಿನ  ರಕ್ತದ ಬಣ್ಣವು ಹರಿವಿನ ವೇಗ ಮತ್ತು ಆಕ್ಸಿಜನ್‌ಗೆ ಒಳಪಡುವಿಕೆ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಬದಲಾಗಬಹುದು. ಪ್ರಕಾಶಮಾನವಾದ ಕೆಂಪು ಬಣ್ಣವು ಸಾಮಾನ್ಯವಾಗಿದ್ದು, ಗಾಢ ಛಾಯೆಗಳು ಸಹ ಸಾಮಾನ್ಯವೇ ಆಗಿವೆ. ಈ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಮುಟ್ಟಿನ  ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಲು ನಿಮಗೆ ಸಹಾಯ ಮಾಡುತ್ತದೆ. ಇತರ ರೋಗಲಕ್ಷಣಗಳೊಂದಿಗೆ ಅಸಾಮಾನ್ಯ ಬಣ್ಣಗಳನ್ನು ನೀವು ಗಮನಿಸಿದರೆ, ವೈದ್ಯರನ್ನು  ಸಂಪರ್ಕಿಸಿ. ತಿಳುವಳಿಕೆಯಿಂದಿರಿ, ನೆಮ್ಮದಿಯಿಂದಿರಲು ನಿಮ್ಮ ಮುಟ್ಟಿನ  ಆರೋಗ್ಯವನ್ನು ಕಾಪಾಡಿಕೊಳ್ಳಿ.